ಸಿದ್ದಾಪುರ: ನಾಮದೇವ ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಸಿದ್ದಾಪುರ ನಾಮದೇವ ಸಿಂಪಿ ಸಮಾಜದ ಪ್ರಮುಖರು ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕ ಅಧ್ಯಕ್ಷ ನೀತಿನಕುಮಾರ್ ಭಟ್ಟಿ ಉಪಾಧ್ಯಕ್ಷ ವಿಜಯಕುಮಾರ್ ಧಾವಸ್ಕರ್, ಕಾರ್ಯದರ್ಶಿ, ರಾಘವೇಂದ್ರ ಶಿಗ್ಗಾವಕರ, ರಮೇಶ್ ಬೆನ್ನೂರ್, ಕೃಷ್ಣಮೂರ್ತಿ ಭೊಂಗಾಳೇ, ಅಮರನಾಥ ಭಟ್ಟಿ, ಸುರೇಶ್ ಶಿಗ್ಗಾವಕರ, ಇನ್ನಿತರರು ಹಾಗೂ ಮಹಿಳಾ ಸದಸ್ಯ ಯಶೋಧಾ ಭಟ್ಟಿ ಉಪಸ್ಥಿತರಿದ್ದರು.
ಸಿಂಪಿ ಸಮಾಜದ ನಿಗಮ ಮಂಡಳಿ ಸ್ಥಾಪಿಸುವಂತೆ ಮನವಿ
