Slide
Slide
Slide
previous arrow
next arrow

TSS: ಅಡಿಕೆ ಎಲೆಚುಕ್ಕೆ ಮತ್ತು ಪರ್ಯಾಯ ಕಾರ್ಯಾಗಾರ- ಜಾಹೀರಾತು

300x250 AD

ಅಡಿಕೆಗೆ ಕಳೆದ ನಾಲೈದು ವರ್ಷಗಳಿಂದ ತಗುಲಿರುವ ಎಲೆ ಚುಕ್ಕೆ ರೋಗ ಭಾರೀ ಹಾನಿ ಮಾಡುತ್ತಿದೆ. ಕಳಸ, ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಈಗಾಗಲೇ 25% ನಿಂದ 95% ರಷ್ಟು ಫಸಲು ನಷ್ಟ ಆಗುತ್ತಿದೆ. ಕೊಲೆಟೊಟ್ರೈಕಂ ಗಿಯೋಸ್ಪೊರೈಡ್ಸ್ ಮತ್ತಿತರೆ ಶಿಲೀಂಧ್ರಗಳ ಸಂಯೋಜಿತ ದಾಳಿಯಿಂದ ಬರುವ ಈ ರೋಗ ನಿಧಾನವಾಗಿ ಇತರೆ ಸಾಂಪ್ರದಾಯಿಕ ಅಡಿಕೆ ಬೆಳೆ ಪ್ರದೇಶಗಳಿಗೆ ಹಬ್ಬುತ್ತಿದೆ. ಶಿರಸಿಯ ಭಾಗಕ್ಕೆ ಇದೇ ಸೆಪ್ಟೆಂಬರ್ ನಲ್ಲಿ ಕಾಲಿಟ್ಟಿದೆಯಾದರೂ ಈಗಾಗಲೇ ನೇರ್ಲದ್ದ ಗೋಳಿ, ಜಾನ್ಮನೆ, ಬಾಳೇಸರ ಮುಂತಾದ ಭಾಗಗಳಲ್ಲಿ ಸಾಕಷ್ಟು ಹಾನಿ ಮಾಡಿದೆ.

ಈ ಶಿಲೀಂದ್ರಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧಿ ಇವೆಯಾದರೂ ಸಪ್ಟೆಂಬರ್ ಅವಧಿಯಲ್ಲಿ ಭಾರೀ ಮಳೆ ಈ ಶಿಲೀಂಧ್ರಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧಗಳು ಇವೆಯಾದರೂ ಮತ್ತು ಪರಿಣಾಮಕಾರೀ ಸಾಮೂಹಿಕ ಸಿಂಪಡಣೆ ಸಾಧ್ಯವಾಗದಿರುವುದು ಮುಂತಾದ ಕಾರಣಗಳಿಂದ ಕ್ಷೇತ್ರ ಮಟ್ಟದಲ್ಲಿ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹಳದಿ ಎಲೆ ರೋಗದಂತೆ ಈ ಎಲೆಚುಕ್ಕೆ ರೋಗ ಕೂಡ ಖಾಯಂ ಆಗುವ ಅಪಾಯ ಕಂಡುಬರುತ್ತಿದೆ. ಹಾಗಾಗಿ ರೈತರು ಸಾಧ್ಯವಿರುವ ಎಲ್ಲ ಉಪಬೆಳೆ- ಅಂತರ ಬೆಳೆಗಳನ್ನು ಈ ಕೂಡಲೆ ಆರಂಭಿಸಿ ಅಡಿಕೆ ಫಸಲಿನಲ್ಲಾಗಬಹುದಾದ ನಷ್ಟವನ್ನು ಸರಿದೂಗಿಸಲು ಮುಂದಾಗಬೇಕಿದೆ. ಆದರೆ ಬಹುತೇಕ ಬೆಳೆಗಾರರು ಅವೈಜ್ಞಾನಿಕ ಸುದ್ದಿಗಳನ್ನು ನಂಬಿ ನಮ್ಮ ಅಡಿಕೆಗೆ ಏನೂ ಆಗಲಿಕ್ಕಿಲ್ಲ ಎಂಬ ಭ್ರಮೆಯಲ್ಲಿ ರೋಗ ಪ್ರಸಾರ ನೋಡಿಯೂ ದಿನ ದೂಡುತ್ತಿದ್ದಾರೆ. ಅಡಿಕೆಯೆಂಬ ಸೋಮಾರಿ ಬೆಳೆಯ ನೆರಳಿನಲ್ಲಿ ಹಾಯಾಗಿದ್ದಾರೆ.

ಈ ನಿಟ್ಟಿನಲ್ಲಿ ಬೆಳೆಗಾರರನ್ನು ಎಚ್ಚರಿಸಿ, ಪರ್ಯಾಯ ಬೆಳೆಗಳ ಕುರಿತು ಮಾರ್ಗದರ್ಶನ ಮಾಡಲು ಶಿರಸಿಯಲ್ಲಿ ಇದೇ ಶನಿವಾರ, 18-03-2023 ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಫಾರ್ಮ್ ಟಿವಿ, ಟಿ.ಎಸ್.ಎಸ್. ಹಾಗೂ ಟಿ.ಎಂ.ಎಸ್. ಗಳ ಸಹಯೋಗದಲ್ಲಿ ಸಿರ್ಸಿಯ ಎ.ಪಿ.ಎಂ.ಸಿ. ಮಾರುಕಟ್ಟೆ ಪಾಂಗಣದ ಟಿ.ಆರ್.ಸಿ. ಬ್ಯಾಂಕಿನ ಸಭಾಂಗಣದಲ್ಲಿ ಈ 1 ದಿನದ ಕಾರ್ಯಾಗಾರ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ರೈತರಲ್ಲದೇ ಯಾವುದೇ ಭಾಗದ ಅಡಿಕೆ ಬೆಳೆಗಾರರು ಉಚಿತವಾಗಿ ಭಾಗವಹಿಸಬಹುದು. ಡಾ. ವೇಣುಗೋಪಾಲ ಮತ್ತು ಸಿ.ಪಿ.ಸಿ.ಆರ್.ಐ.ನ ಹಿರಿಯ ವಿಜ್ಞಾನಿಗಳು ಹಾಗೂ ಅನುಭವಿ ಬೆಳೆಗಾರರು ಮಾರ್ಗದರ್ಶನ ಮಾಡಲಿದ್ದಾರೆ. ಮುಂಜಾನೆ ರೋಗದ ತೀವ್ರತೆ ಚರ್ಚೆಯಾದರೆ, ಮದ್ಯಾಹ್ನ ಪರ್ಯಾಯಗಳ ವಿಮರ್ಶೆ ನಡೆಯಲಿದೆ.

300x250 AD

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಫಾರ್ಮ್ ಟಿವಿ
Tel:+919980534320

TSS Sirsi

Share This
300x250 AD
300x250 AD
300x250 AD
Back to top