Slide
Slide
Slide
previous arrow
next arrow

ಮಾ.18ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ

300x250 AD

ಶಿರಸಿ: ಹುಲೇಕಲ್ ಹೋಬಳಿ ವ್ಯಾಪ್ತಿಯ ಹಾಗೂ ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಸಮಾಜದವರಿಂದ ಗುರುವಂದನಾ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಮಾ.18ರ ಬೆಳಿಗ್ಗೆ 10ಕ್ಕೆ ಹುಲೇಕಲ್ ಕನ್ನಡ ಶಾಲೆ ಆವರಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ನಾಮಧಾರಿ ಕುಲಗುರು, ಉಜಿರೆ ಶ್ರೀರಾಮಕ್ಷೇತ್ರ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಗುರುವಂದನಾ ಕಾರ್ಯಕ್ರಮ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯ ನಿಮಿತ್ತ ಅಂದು ಬೆಳಿಗ್ಗೆ 9.30ಕ್ಕೆ ಹುಲೇಕಲ್‌ನ ಬನ್ನಿಕಟ್ಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಪೂರ್ಣಕುಂಭ ಮೇಳದೊಂದಿಗೆ ಸ್ವಾಗತ, 11 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗುರುಗಳ ಪಾದಪೂಜೆ ಮತ್ತು 11.30ಕ್ಕೆ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಂದ ಆಶೀರ್ವಚನ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಸಲಾಗುವುದು.
ಕಾರಣ ಎಲ್ಲಾ ಸಮಾಜ ಬಾಂಧವರು, ಸಮಸ್ತ ಗೌರವಾನ್ವಿತ ಊರ ನಾಗರಿಕರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಪ್ರಸಾದ ಸ್ವೀಕರಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ಕೋರಿದೆ.

300x250 AD
Share This
300x250 AD
300x250 AD
300x250 AD
Back to top