Slide
Slide
Slide
previous arrow
next arrow

ಬಿಜೆಪಿಗೆ ರೈತರ ಸಭೆ ನಡೆಸುವ ಯೋಗ್ಯತೆ ಇಲ್ಲ: ಕೆಪಿಆರ್‌ಎಸ್ ಕಿಡಿ

300x250 AD

ಕಾರವಾರ: ಶಿರಸಿಯಲ್ಲಿ ಗುರುವಾರ ರೈತರ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿರುವುದು ಅವರ ಯೋಗ್ಯತೆಗೆ ತಕ್ಕುದಲ್ಲ. ರೈತರ ಸಂಕಷ್ಟ ಹೆಚ್ಚಿಸಿದ ಪಕ್ಷ ರೈತ ಸಮಾವೇಶ ನಡೆಸುವುದು ಹಾಸ್ಯಾಸ್ಪದ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶಾಂತಾರಾಮ ನಾಯಕ ಸಮಾವೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಅವಧಿಯಲ್ಲಿ ದೆಹಲಿಯಲ್ಲಿ ಕೇಂದ್ರ ಸರಕಾರದ ಮೂರು ರೈತ ವಿರೋಧಿ ಕಾನೂನನ್ನು ವಾಪಸ್ಸು ಪಡೆಯಲು ಒಂದು ವರ್ಷಕ್ಕೂ ಮೇಲ್ಪಟ್ಟು ಪ್ರತಿಭಟನೆ ನಡೆಸಬೇಕಾಯಿತು. ಈ ಐತಿಹಾಸಿಕ ಹೋರಾಟದಲ್ಲಿ 715ಕ್ಕೂ ಹೆಚ್ಚು ರೈತರು ಹುತಾತ್ಮರಾದರು, ಲಕ್ಷಾಂತರ ರೈತರು 378 ದಿನಗಳು ದೆಹಲಿಯ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ರಾತ್ರಿ ಹಗಲು ಉಗ್ರ ಹೋರಾಟ ಮಾಡಿದಾಗ ಕೇಂದ್ರ ಸರಕಾರ ಮಣಿಯಿತು. ಸ್ವಾತಂತ್ರ‍್ಯ ಹೋರಾಟದ ನಂತರ ನಡೆದ ಐತಿಹಾಸಿಕ ಚಳುವಳಿ ಇದಾಗಿತ್ತು.

300x250 AD

ಈ ಐತಿಹಾಸಿಕ ಹೋರಾಟದ ಒಪ್ಪಂದದ ಸಂದರ್ಭದಲ್ಲಿ ವಿದ್ಯುತ್ ಖಾಸಗೀಕರಣ ಮಸೂದೆ ಬಗ್ಗೆ ರೈತ ಸಂಘಟನೆಗಳ ಜೊತೆ ಚರ್ಚಿಸಿ ತೀರ್ಮಾನಿಸುವದಾಗಿ ಹೇಳಿದ್ದರು. ಆದರೆ ಕೊಟ್ಟ ಮಾತಿಗೆ ತಪ್ಪಿ ರೈತರ ಸರ್ವನಾಶಕ್ಕೆ ಕಾರಣವಾಗುವ ವಿದ್ಯುತ್ ಮಸೂದೆಯನ್ನು ಸಂಸತ್‌ನಲ್ಲಿ ಸರಕಾರ ಮಂಡಿಸಿದೆ. ಸಂಯುಕ್ತ ಕಿಸಾನ್ ಮೋರ್ಚಾ ಈ ಮಸೂದೆಯನ್ನು ಬಲವಾಗಿ ವಿರೋಧಿಸಿ ಹೋರಾಟ ನಡೆಸುತ್ತಿವೆ. ಕಾನೂನು ಮಾನ್ಯತೆಯೊಂದಿಗೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕೆಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.
ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾದ ಮೂರು ರೈತ ವಿರೋಧಿ ಕಾಯಿದೆ ಜಾರಿಗೊಳಿಸಿದ್ದಾರೆ. ಭೂ ತಿದ್ದುಪಡಿ ಕಾಯ್ದೆ, ಎಪಿಎಮ್‌ಸಿ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ  ಇವು ವಾಪಸ್ಸಾಗಬೇಕೆಂದು ರೈತ ಸಂಘಟನೆಗಳು ಹೋರಾಟ ನಡೆಸಿವೆ. ಇಂತಹ ರೈತ ವಿರೋಧಿ ಕೇಂದ್ರ ಮತ್ತು ರಾಜ್ಯ ಸರಕಾರ ನಡೆಸುವ ಬಿಜೆಪಿ ರೈತರ ಸಮಾವೇಶ ಮಹಾವಂಚನೆಯಾಗುತ್ತದೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top