ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವಿಸ್ತರಣಾ ಶಾಖೆ ಮತ್ತು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಶಿರಸಿ ತೋಟಗಾರಿಕಾ ಸಂಶೋಧನಾ ವಿಜ್ಞಾನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಸಿ, ಎಸ್‌ಪಿ ಯೋಜನೆ ಅಡಿ ಕಾಳುಮೆಣಸಿನ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ತೋಟಗಾರಿಕಾ ಸಂಶೋಧನಾ ವಿಜ್ಞಾನ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಶಾಂತಪ್ಪ ತಿರ್ಕಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಸಹಾಯಕ ತೋಟಗಾರಿಕಾ ನಿರ್ದೇಶಕ ಅಣ್ಣಪ್ಪ ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಸಿಬಿಡಿ ಆರ್‌ಸೆಟಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ, ಸಹಾಯಕ ಪ್ರಾಧ್ಯಾಪಕ ಸುಧೀಶ್ ಕುಲಕರ್ಣಿ ಇದ್ದರು. ಅಧ್ಯಕ್ಷತೆಯನ್ನು ತೋಟಗಾರಿಕಾ ಸಂಶೋಧನಾ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಅಬ್ದುಲ್ ಕರೀಂ ವಹಿಸಿದ್ದರು. ಸಿಬಿಡಿ ಆರ್‌ಸೆಟಿಯ ವಿಜಯ ನಾಯ್ಕ ಹಾಗೂ ಶಾಂತಕುಮಾರ್ ಕೆ. ಕಾರ್ಯಕ್ರಮ ಸಂಘಟಿಸಿದ್ದರು.