• Slide
    Slide
    Slide
    previous arrow
    next arrow
  • ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಜಾನುವಾರು ವಿಮೆಯ ಚೆಕ್‌ ವಿತರಣೆ

    300x250 AD

    ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಬಿದ್ರಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಜಾನುವಾರುಗಳು ಮರಣ ಹೊಂದಿದ ಕಾರಣಕ್ಕೆ ಮೃತ ಜಾನುವಾರುಗಳ ಫಲಾನುಭವಿಗಳಿಗೆ ಜಾನುವಾರು ವಿಮಾ ಯೋಜನೆಯ ಅಡಿಯಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಇವರು ಧಾರವಾಡ ಸಹಕಾರ ಹಾಲು ಒಕ್ಕೂಟದ ಶಿರಸಿಯ ಅಗಸೇಬಾಗಿಲಿನಲ್ಲಿರುವ ಕಚೇರಿಯಲ್ಲಿ ಮಂಗಳವಾರ ವಿತರಿಸಿದರು.

    ಸಂಘದ ಸದಸ್ಯೆ ಪಾರ್ವತಿ ಗಣೇಶ ನಾಯ್ಕ ಇವರ ಆಕಳು ಮರಣ ಹೊಂದಿದ ಕಾರಣ ರೂ.43,000/- ಮೊತ್ತದ ಚೆಕ್‌, ಗುಡ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಾಗದ ದೇವರಾಜ ಬಸಪ್ಪ ನಾಯ್ಕ, ಮಧುಕೇಶ್ವರ ಕೆ ನಾಯ್ಕ ಇವರುಗಳು ಆಕಳುಗಳು ಮರಣ ಹೊಂದಿದ ಕಾರಣ ತಲಾ ರೂ.50,000/- ಹಾಗೂ ರೂ.45,000/-, ಗಳ ಮೊತ್ತದ ಚೆಕ್‌ಗಳನ್ನು, ಮತ್ತು ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಾದ ಸೋಮಣ್ಣ ಬೆಳ್ಳಪ್ಪ ನಾಯ್ಕ, ಟಾಕಪ್ಪ ಕೆರಿಯಪ್ಪ ನಾಯ್ಕ, ಸುಜೀತ ಮಂಜಪ್ಪ ನಾಯ್ಕ ಇವರ ಆಕಳುಗಳು ಮರಣ ಹೊಂದಿದ ಕಾರಣ ತಲಾ ರೂ.38,000/-, ರೂ.38,000/-, ಹಾಗೂ ರೂ.38,000/-, ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಕೆಶಿನ್ಮನೆ, ರಾಜ್ಯಾದಂತ ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗೂ ಹಾಲಿನ ಇನ್ನಿತರ ವಸ್ತುಗಳ ಮೇಲಿನ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹಾಲಿನ ಶೇಖರಣೆ ಆಗದೇ ಇರುವುದರಿಂದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ ಕಾರಣ ತಾವುಗಳು ಹೈನುಗಾರಿಕೆಯಿಂದ ವಿಮುಖರಾಗದೇ ಜಾನುವಾರು ವಿಮಾ ಯೋಜನೆಯಿಂದ ದೊರಕಿದ ಹಣದಲ್ಲಿ ಮತ್ತೊಂದು ಆಕಳನ್ನು ಖರೀದಿಸಿ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಬೇಕು ಎಂದರು. ತಮ್ಮ ಎಲ್ಲಾ ಜಾನುವಾರುಗಳಿಗೆ ಕೂಡಲೇ ವಿಮೆಯನ್ನು ಮಾಡಿಸಬೇಕು, ಒಂದು ವರ್ಷದ ಹಿಂದೆ ಈಗಾಗಲೇ ವಿಮೆಯನ್ನು ಮಾಡಿಸಲಾದ ಜಾನುವಾರುಗಳಿಗೆ ನಮ್ಮ ಒಕ್ಕೂಟದ ಪಶುವೈದ್ಯರನ್ನು ಸಂಪರ್ಕಿಸಿ ಜಾನುವಾರು ವಿಮೆಯನ್ನು ನವೀಕರಣಗೊಳಿಸಿಕೊಳ್ಳಬೇಕು ಎಂದು ವಿಮಾ ಸೌಲಭ್ಯದಡಿ ಚೆಕ್‌ ಪಡೆದ ಫಲಾನುಭವಿಗಳಿಗೆ ಕರೆ ನೀಡಿದರು.

    300x250 AD

    ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಮಧುರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಚಂದ್ರಕಾಂತ ನಾಯ್ಕ, ಜಾನುವಾರು ವಿಮಾ ಯೋಜನೆಯ ಫಲಾನುಭವಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top