ದಾಂಡೇಲಿ: ದೇಶದಲ್ಲಿ ಆಮ್ ಆದ್ಮಿ ಪಕ್ಷ ಉತ್ತಮ ಶಕ್ತಿಯಾಗಿ ಬೆಳೆಯುತ್ತಿದೆ. ಸಮಿಕ್ಷೆ ಪ್ರಕಾರ ಸಂಘನೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇಯ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಮೂರನೇಯ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ, ನಾಲ್ಕನೆ ಸ್ಥಾನದಲ್ಲಿ ಜೆಡಿಎಸ್ ಇದೆ. ಉತ್ತರ ಕನ್ನಡದಲ್ಲಿ ಪಕ್ಷ ಬೆಳೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ ಪಿ.ನಾಯ್ಕ ನುಡಿದರು.
ನಗರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಪಕ್ಷ ಸೇರಿದ ಕಾರ್ಯಕರ್ತರು ಸ್ವಯಂ ಇಚ್ಛೆಯಿಂದ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಪಕ್ಷ ಸೇರ್ಪಡೆಗೊಂಡಿದ್ದಾರೆ ಎಂದರು.
ಕೇಂದ್ರದ ಮೋದಿ ಸರ್ಕಾರ ಆಮ್ ಆದ್ಮಿ ದೆಹಲಿಯ ಸಚಿವರುಗಳ ಮೇಲೆ ಸುಳ್ಳು ಆರೋಪವನ್ನು ಮಾಡಿ, ದೆಹಲಿ ಮುಖ್ಯಮಂತ್ರಿ ಕ್ರೇಜಿವಾಲರವರ ಶಕ್ತಿ ಕುಂದಿಸಲು ಯತ್ನಿಸುತ್ತಿದೆ. ಬರುವ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಬೆಲೆ ಏರಿಕೆಯಿಂದ, ಬಿಜೆಪಿ ಶಾಸಕನ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿರುವುದು ಹೀಗೆ ಇನ್ನೂ ಅನೇಕ ಘಟನೆಗಳಿಂದಾಗಿ ಜನ ಆಮ್ ಆದ್ಮಿ ಪಕ್ಷದತ್ತ ಸ್ವಇಚ್ಛೆಯಿಂದ ಒಲವು ತೋರಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಪಕ್ಷದ ದಾಂಡೇಲಿ ಘಟಕದ ಅಧ್ಯಕ್ಷ ಗುರುದೀಪ ಸಿಂಗ್ ಸಂದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಭದ್ರ ಆರ್. ನಾಯ್ಕ, ಮುಖಂಡರುಗಳಾದ ಖಾನ್ ಮೊಹಮ್ಮದ್ ಅಯಾಜ್ ಯಾಕೂಬ್, ಅಬ್ದುಲ್ ನಾಸೀರ್ ಭಟ್ಕಳ, ತಾಹೀರ್ ಶಾಹೀರ್ ಮುಸೀರ್ ಅಹ್ಮದ್ ಎಂ ಸೈಯ್ಯದ್, ಹಾಗು ಪಕ್ಷದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಇದ್ದರು.