• Slide
    Slide
    Slide
    previous arrow
    next arrow
  • ವಸತಿ ನಿಲಯ ನಿರ್ಮಾಣಕ್ಕೆ ಶಾಸಕ ಆರ್‌ವಿಡಿ ಚಾಲನೆ

    300x250 AD

    ಜೋಯಿಡಾ: ನೂತನವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2 ಕೋಟಿ 10 ಲಕ್ಷ ಅನುದಾನದ ನೂತನ ವಸತಿ ನಿಲಯ ಕಟ್ಟಡಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಶಂಕುಸ್ಥಾಪನೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ವಿನ ಮಹತ್ವ ನೀಡುತ್ತೇನೆ, ನನ್ನ ಭಾಗದಲ್ಲಿ ಯಾವೊಂದು ಮಗುವು ಶಿಕ್ಷಣದಿಂದ ವಂಚಿತರಾಗಬಾರದು, ಜೋಯಿಡಾ ತಾಲೂಕಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು, ತಾಲೂಕು ಕಾಡಿನಿಂದ ಕೂಡಿದ ಪ್ರದೇಶವಾದ್ದರಿಂದ ಇಲ್ಲಿನ ಮಕ್ಕಳಿಗೆ ವಸತಿ ನಿಲಯ ಅಗತ್ಯವಾಗಿದೆ ಆದ್ದರಿಂದ ಇಲ್ಲಿನ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ನೂತನ ಕಟ್ಟಡ ಮಂಜೂರು ಮಾಡಲಾಗಿದೆ ಎಂದು ಮಕ್ಕಳಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

    300x250 AD

    ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ, ಮಾಜಿ ಜಿ.ಪಂ.ಸದಸ್ಯ ರಮೇಶ ನಾಯ್ಕ, ರವಿ ರೇಡ್ಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆನಂದ ಪಾಟೀಲ್ ಹಾಗೂ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top