ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇಂಟ್ ಅಂಥೋನಿ ಚರ್ಚ್ ಮತ್ತು ಶೇವಾಳಿ ಕಾರೆಮನೆ ಗ್ರಾಮದಲ್ಲಿ ಎಸ್.ಎಲ್. ಘೋಟ್ನೇಕರ ಅವರಿಗೆ ಅವರ ಅಭಿಮಾನಿ ಬಳಗದಿಂದ ಗೌರವ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು.
ಶೇವಾಳಿ ಕಾರೆಮನೆ ರಸ್ತೆಗೆ 5 ಲಕ್ಷ ಅನುದಾನ ಹಾಗೂ ನಂದಿಗದ್ದಾ ಚರ್ಚ ರಂಗಮಂದಿರಕ್ಕೆ 1 ಲಕ್ಷ ಅನುದಾನವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ನೀಡಿದ ಬೆನ್ನಲ್ಲಿ ಅವರ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ. ಸದಸ್ಯ ಶರತ ಗುರ್ಜರ, ಜೆಡಿಎಸ್ ತಾಲೂಕಾ ಅಧ್ಯಕ್ಷ ಅಜಿತ ತೋರವಥ್, ಜಿಡಿಎಸ್ ರಾಜ್ಯ ವಕ್ತಾರ ರೋಷನ್ ಬಾವುಜಿ, ಘೋಟ್ನೇಕರ ಅಭಿಮಾನಿ ಬಳಗದ ಸದಾಶಿವ ದೇಸಾಯಿ, ಶ್ರೀನಾಥ್ ದೇಸಾಯಿ, ಪ್ರಸಾದ ಆಳ್ಕೆ, ಸುಮಂಗಲಾ ದೇಸಾಯಿ, ಪಿಂಟೂ ಫರ್ನಾಂಡಿಸ್, ಆನಂದ ಪ್ರಕಾಶ ಇತರರು ಇದ್ದರು.
ಎಸ್.ಎಲ್.ಘೋಟ್ನೇಕರ್‌ಗೆ ಅಭಿಮಾನಿಗಳ ಸನ್ಮಾನ
