Slide
Slide
Slide
previous arrow
next arrow

ಕೊಳಚೆ ನಿರ್ಮೂಲನಾ ಮಂಡಳಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

300x250 AD

ದಾಂಡೇಲಿ: ನಗರದ ಹಳೆದಾಂಡೇಲಿ ವಾರ್ಡ್ ನಂ.27ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಡಿ ಮನೆ ನಿರ್ಮಿಸಿಕೊಂಡ 130 ಫಲಾನುಭವಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಹಕ್ಕುಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಕೊಳಚೆ ನಿರ್ಮೂಲನಾ ಮಂಡಳಿಯಡಿ ದಾಂಡೇಲಿ ನಗರದಲ್ಲಿ ಒಟ್ಟು 1176 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಐತಿಹಾಸಿಕ ದಾಖಲೆಯನ್ನು ಮಾಡಲಾಗಿದೆ. ಕೊಳಚೆ ಪ್ರದೇಶದ ಜನರ ಬಹುವರ್ಷಗಳ ಬೇಡಿಕೆ ಸದೃಢ ಮನೆ ನಿರ್ಮಾಣವಾಗುವ ಮೂಲಕ ಈಡೇರಿದೆ. ಸುಭದ್ರ ಮನೆ ಪ್ರತಿಯೊಬ್ಬ ಮಾನವನಿಗೆ ಮಾನಸಿಕವಾದ ನೆಮ್ಮದಿಯನ್ನು ತಂದುಕೊಡುತ್ತದೆ. ಕೊಳಚೆ ಪ್ರದೇಶದ ಪ್ರತಿಯೊಬ್ಬರ ಮನೆಗಳು ಸದೃಢ ಮನೆಗಳಾಗಿ ಪರಿವರ್ತನೆಯಾಗಬೇಕೆಂಬ ಸದಾಶಯವನ್ನಿಟ್ಟುಕೊಂಡು ಮನೆಗಳ ನಿರ್ಮಾಣಕ್ಕೆ ಅವಿರತ ಶ್ರಮಿಸಲಾಗಿದೆ. ಇನ್ನೂ ಕೆಲವೆ ಕೆಲವು ಸಮಯಗಳೊಳಗೆ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆ. ಈ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಸಂದಾಯ ಮಾಡಬೇಕಾದ ವಂತಿಗೆ ಹಣವನ್ನು ಸಕಾಲದಲ್ಲಿ ಪಾವತಿ ಮಾಡುವುದರ ಮೂಲಕ ಮುಂದಿನ ಕೆಲಸಕ್ಕೆ ಅನುವು ಮಾಡಿಕೊಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ವಾರ್ಡಿನ ಸದಸ್ಯರಾದ ಅನಿಲ್ ನಾಯ್ಕರ್ ಮಾತನಾಡಿ, ಆರ್.ವಿ. ದೇಶಪಾಂಡೆ ವಿಶೇಷ ಪ್ರಯತ್ನದಡಿಯಲ್ಲಿ ಈ ಯೋಜನೆ ಮಂಜೂರಾಗಿದೆ. ಆಧುನಿಕ ಭಗಿರಥನ ರೂಪದಲ್ಲಿ ದೇಶಪಾಂಡೆಯವರು ನಮ್ಮ ಕ್ಷೇತ್ರದ ಶಾಸಕರಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ನಗರದ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವ ಆರ್.ವಿ.ದೇಶಪಾಂಡೆಯವರ ಸಾಮಾಜಿಕ ಬದ್ಧತೆ ನಮಗೆಲ್ಲ ಸ್ಫೂರ್ತಿ ಎಂದರು.

300x250 AD

ಈ ಸಂದರ್ಭದಲ್ಲಿ ಅನಿಲ್ ನಾಯ್ಕರ್ ಹಾಗೂ ಸ್ಥಳೀಯ ಮುಖಂಡರುಗಳಾದ ದಿವಾಕರ ನಾಯ್ಕ, ಮಹೇಶ ನಾಯ್ಕ, ಮಂಜು ರಾಥೋಡ ಮೊದಲಾದವರ ನೇತೃತ್ವದಲ್ಲಿ ಆರ್.ವಿ.ದೇಶಪಾಂಡೆಯವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಪ್ರತಾಪಸಿಂಗ್ ರಜಪೂತ್ ನೇತೃತ್ವದಲ್ಲಿ ಅನಿಲ್ ನಾಯ್ಕರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತೊ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ನಗರಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನ ವಹಾಬ್ ಮೊದಲಾದವರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುದಾಸ್ ಎನಿಬೇರಾ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top