• Slide
    Slide
    Slide
    previous arrow
    next arrow
  • ಮುಚ್ಚಿರುವ ಸಾರ್ವಜನಿಕ ಶೌಚಾಲಯಗಳನ್ನು ತೆರೆಯುವಂತೆ ಜನರ ಆಗ್ರಹ

    300x250 AD

    ಯಲ್ಲಾಪುರ: ಜಾತ್ರೆಯ ನಂತರ ಇತ್ತೀಚೆಗೆ ನಿರ್ಮಾಣವಾದ ಶೌಚಾಲಯ ಹಾಗೂ ಹಿಂದಿನ ಶೌಚಾಲಯಗಳು ಬಾಗಿಲು ಮುಚ್ಚಿ ಸಾರ್ವಜನಿಕರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಹಲವಾರು ಜನ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
    ಹಿಂದೆ ಯಲ್ಲಾಪುರ ಪಟ್ಟಣವು ಶೌಚಾಲಯ ರಹಿತ ಪಟ್ಟಣ ಎಂದು ಅಪಖ್ಯಾತಿಗೆ ಒಳಗಾಗಿತ್ತು, ಇದೀಗ ಪಟ್ಟಣದಲ್ಲಿ ಸಾರ್ವಜನಿಕರ ಬಳಕೆಗೆ ಶೌಚಾಲಯ ನಿರ್ಮಿಸಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಮತ್ತಷ್ಟು ಆಧುನಿಕ ರೀತಿಯ ಶೌಚಾಲಯ ನಿರ್ಮಾಣವಾಗಿದೆ. ಜಾತ್ರೆಯ ಸಂದರ್ಭದಲ್ಲಿ ಇದ್ದಿರುವ ಶೌಚಾಲಯದ ಜೊತೆಗೆ ಮೊಬೈಲ್ ಶೌಚಾಲಯಗಳನ್ನು ಕೂಡ ತರಿಸಲಾಗಿತ್ತು. ನಿರ್ವಹಣೆ ಸ್ವಚ್ಛತೆ ಸೇರಿದಂತೆ ಯಾರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು.
    ಜಾತ್ರೆಯವರೆಗೆ ಬಳಕೆಯಾದ ಈ ಶೌಚಾಲಯಗಳು, ನಂತರ ಬಾಗಿಲು ಮುಚ್ಚಿ ಸಾರ್ವಜನಿಕರನ್ನು ಅಣಕಿಸುವಂತೆ ಮಾಡಲಾಗಿದೆ. ಇದೀಗ ಶೌಚಾಲಯಗಳ ಬಾಗಿಲು ಮುಚ್ಚಲಾಗಿದ್ದು, ಪಟ್ಟಣದಲ್ಲಿ ಚಿಕ್ಕ ಪುಟ್ಟ ಅಂಗಡಿ ವ್ಯಾಪಾರ ನಡೆಸುವವರು, ಅಂಗಡಿ, ಆಸ್ಪತ್ರೆ, ವ್ಯಾಪಾರ ವಹಿವಾಡಿಗಾಗಿ ಬರುವ ಗ್ರಾಹಕರು, ವ್ಯಾಪಾರಿಗಳು, ಹಳ್ಳಿಯ ಜನರಿಗೆ ಶೌಚಾಲಯವಿಲ್ಲದೆ ಸಮಸ್ಯೆಯಾಗಿದೆ. ಹಿಂದಿನಂತೆ ಬಯಲು ಶೌಚಾಲಯ, ಜೀಡು, ರಸ್ತೆಯ ಪಕ್ಕ ಗಟಾರಗಳನ್ನು ಬಳಸುವಂತಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿಯವರು ಗಮನಹರಿಸಿ ಕೂಡಲೇ ಮುಚ್ಚಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಒದಗಿಸಿ ಕೊಡಬೇಕೆಂದು ಹಲವಾರು ಜನ ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top