• Slide
    Slide
    Slide
    previous arrow
    next arrow
  • ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ಕೊಡ್‌ವೆಸ್’ನಿಂದ ನೀರಿನ ಶುದ್ಧೀಕರಣ, ಕೆರೆಗೆ ಬಾಗಿನ ಸಮರ್ಪಣೆ

    300x250 AD

    ಶಿರಸಿ: ನೀರಿನ ಶುದ್ದೀಕರಣ ಕಾರ್ಯಕ್ರಮವನ್ನು ನಮ್ಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡಿರುವುದು ತುಂಬಾ ಖುಷಿ ಸಂಗತಿ. ನೀರಿನ ಶುದ್ದೀಕರಣ ಮಾಡುವುದರಿಂದ ಗ್ರಾಮದ ಜನರ ಆರೋಗ್ಯದಲ್ಲಿಯೂ ಸುಧಾರಣೆಯಾಗುತ್ತದೆ ಎಂದು ಕೋರ್ಲಕಟ್ಟಾ ಗ್ರಾಮ ಪಂಚಾಯಿತಿ ಸದಸ್ಯರು ಮಂಜುಳಾ ಕಬ್ಬೇರ್ ಹೇಳಿದರು.

    ಸ್ಕೊಡ್‌ವೆಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ನೀರಿನ‌ ಶುದ್ಧೀಕರಣ ಹಾಗೂ‌ ಕೆರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಧರಣಿ ಹೋಂ ಕೇರ್ ಫೌಂಡರ್ ಮತ್ತು ಸಿ.ಇ.ಓ. ಪೂಜಾ ದೇಶಪಾಂಡೆ ಮಾತನಾಡಿ ರಾಸಾಯನಿಕ ಬಳಕೆ ಹೆಚ್ಚಾಗಿರುವುದರಿಂದ ನಾವು ಉಪಯೋಗಿಸುವ ನೀರಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಜಾಸ್ತಿಯಾಗಿದೆ. ನೀರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಜಾಸ್ತಿ ಮಾಡಿದರೆ ನೀರು ಕುಡಿಯಲು ಯೋಗ್ಯವಾಗುತ್ತದೆ ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

    300x250 AD

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ಕೊಡವೆಸ್ ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತ ಅಧಿಕಾರಿಗಳಾದ ಸರಸ್ವತಿ ಎನ್. ರವಿ ಮಾತನಾಡಿ ಭೂಮಿತಾಯಿ ಕೂಡ ಹೆಣ್ಣು. ಅಂತರಾಷ್ಟ್ರೀ ಯ ಮಹಿಳಾ ದಿನಾಚರಣೆಯಂದು ಭೂಮಿ ತಾಯಿ ಸೇವೆ ಮಾಡೋಣ ಎಂದರು.
    ಕಾರ್ಯಕ್ರಮದಲ್ಲಿ ಸ್ಕೊಡವೆಸ್ ಸಂಸ್ಥೆಯ ಸಿಬ್ಬಂದಿಗಳು, ಹಾಗೂ ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಕೊಡವೆಸ್ ಸಂಸ್ಥೆಯ ಸಿಬ್ಬಂದಿ ಹೇಮಲತಾ ಚೌಗಲೆ ನಿರೂಪಿಸಿ, ಸ್ವಾಗತಿಸಿ, ಅಮೀನಾ ನದಾಫ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top