ದಾಂಡೇಲಿ: ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ನಗರದೆಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಹೋಳಿ ಸಂಭ್ರಮ ನಗರದೆಲ್ಲೆಡೆ ಮನೆ ಮಾಡಿದ್ದು, ನಗರದ ಗಲ್ಲಿ ಗಲ್ಲಿಗಳಲ್ಲಿ ರಂಗಿನಾಟ ತನ್ನ ಮೆರುಗನ್ನು ಹೆಚ್ಚಿಸಿಕೊಂಡಿತು. ಮಕ್ಕಳು, ಮಹಿಳೆಯರು, ವಯೋವೃದ್ದರೆನ್ನದೇ ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿಕೊಂಡರು. ಇನ್ನು ಪ್ರಮುಖ ವಿಶೇಷವೆಂದರೇ ನಗರದಲ್ಲಿ ಎಲ್ಲಾ ಜಾತಿ, ಧರ್ಮ ಬಾಂಧವರು ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುವ ಮೂಲಕ ಸರ್ವಧರ್ಮ ಸಮನ್ವಯತೆಯನ್ನು ಸಾರುವುದರ ಮೂಲಕ ಭಾತೃತ್ವವನ್ನು ಮೆರೆದರು.
ನಗರದ ಸೋಮಾನಿ ವೃತ್ತ, ಕುಳಗಿ ರಸ್ತೆ, ಗಾಂಧಿನಗರ, ಹಳೆದಾಂಡೇಲಿ, ಆಜಾದ್ ನಗರ, ಬೈಲುಪಾರ್, ಸುಭಾಸನಗರ, ಅಂಬೇವಾಡಿ, ನಿರ್ಮಲನಗರ, ಬಸವೇಶ್ವರ ನಗರ, ಸುದರ್ಶನ ನಗರ, ಮಾರುತಿ ನಗರ, 14ನೇ ಬ್ಲಾಕ್, ಟೌನಶಿಪ್, ಕುಳಗಿ ರಸ್ತೆ, ಬಾಂಬೆಚಾಳ, ಹಳಿಯಾಳ ರಸ್ತೆ, ವಿನಾಯಕ ನಗರ, ಮಿರಾಶಿಗಲ್ಲಿ, ದೇಶಪಾಂಡೆ ನಗರ, ಪಟೇಲ್ ನಗರ, ಲೆನಿನ್ ರಸ್ತೆ, ಸಂಡೆ ಮಾರ್ಕೆಟ್ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು.