• Slide
    Slide
    Slide
    previous arrow
    next arrow
  • ಒಂದೇ‌ ಮನೆಯಲ್ಲಿ ಮೂರು ನಾಗರಹಾವುಗಳು ಪ್ರತ್ಯಕ್ಷ

    300x250 AD

    ಕಾರವಾರ: ತಾಲೂಕಿನ ಮಲ್ಲಾಪುರದ ಲಕ್ಷ್ಮೀನಗರದಲ್ಲಿ ಮಂಜುನಾಥ ಎನ್ನುವವರ ಮನೆಯಲ್ಲಿ ಏಕಕಾಲದಲ್ಲಿ 3 ನಾಗರ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.
    ಹಾವುಗಳನ್ನ ಕಂಡು ಭಯಭೀರಾಗಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಮತ್ತು ಉಪವಲಯ ಅರಣ್ಯ ಅಧಿಕಾರಿ ಆನಂದ ಬಜರಂಗ್ ಭೇಟಿ ನೀಡಿ, 3 ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿನಲ್ಲಿ ಒಂದೇ ಸ್ಥಳದಲ್ಲಿ ಬಿಟ್ಟುಬಂದಿದ್ದಾರೆ. ಕಳೆದ 26 ದಿನಗಳಲ್ಲಿ ಅರಣ್ಯ ಇಲಾಖೆಯ ಉರಗ ರಕ್ಷಕ ಬಿಲಾಲ್ ಶೇಖ್ ಅವರು ಕದ್ರಾ ವಲಯದ ಮಲ್ಲಾಪುರದ ವಿವಿಧ ಮನೆಗಳಲ್ಲಿ ಒಟ್ಟು 6 ನಾಗರ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅವುಗಳ ಆವಾಸಕ್ಕೆ ಬಿಟ್ಟಿದ್ದಾರೆ.
    ಒಂದೇ ಮನೆಯಲ್ಲಿ ರಕ್ಷಿಸಿದ 3 ನಾಗರ ಹಾವುಗಳಲ್ಲಿ ಒಂದು ಹೆಣ್ಣು, ಇನ್ನುಳಿದ ಎರಡು ಗಂಡು ಹಾವುಗಳಾಗಿದ್ದವು. ಇದು ನಾಗಗಳ ಮಿಲನ ಋತುವಾಗಿರುವುದರಿಂದ ಒಂದು ಹೆಣ್ಣು ನಾಗವಿರುವ ಸ್ಥಳದಲ್ಲಿ ಎರಡರಿಂದ ಮೂರು ಗಂಡು ನಾಗಗಳಿರುವುದು ಸಾಮಾನ್ಯ. ಮಿಲನ ಋತುವಿನ ಸಮಯದಲ್ಲಿ ಹೆಣ್ಣು ನಾಗಗಳು ಸ್ರವಿಸುವ ಫೆರಮನ್ ವಾಸನೆಯ ಜಾಡನ್ನು ಗಂಡುನಾಗಗಳು ಅನುಸರಿಸಿ ನಾಗಿಣಿಯನ್ನು ಸೇರುತ್ತದೆ. ಈ ಸಂದರ್ಭದಲ್ಲಿ ಗಂಡು ನಾಗಗಳ ಮಧ್ಯೆ ಕಾದಾಟ ನಡೆಯುವ ಸಾಧ್ಯತೆಯು ಉಂಟು. ಈ ವೇಳೆ ಬಲಿಷ್ಠ ನಾಗವು ನಾಗಿಣಿಯನ್ನು ಸೇರುತ್ತದೆ. ಸ್ಥಳೀಯ ಜನರು ನಾಗರ ಹಾವುಗಳು ಪದೇ ಪದೇ ಗೋಚರಿಸುತ್ತಿರುವದರಿಂದ ಆತಂಕಗೊಂಡಿದ್ದಾರೆ. ದೇವರು ಕೋಪಗೊಂಡಿದ್ದಾನೆ ಎಂದು ಪೂಜೆ- ಪುನಸ್ಕಾರಗಳ ಮೊರೆ ಹೋಗಿದ್ದಾರೆ. ಮಿಲನ ಋತುವಿನಲ್ಲಿ ನಾಗಗಳು ಹೆಚ್ಚು ಚಟುವಟಿಕೆಯಿಂದ ಕೂಡಿರುವುದರಿಂದ ಈ ಋತುವಿನಲ್ಲಿ ಪದೇ ಪದೇ ಗೋಚರಿಸುವುದು ಸಾಮಾನ್ಯ. ಇದು ನಿಸರ್ಗದಲ್ಲಿನ ಸಹಜ ಕ್ರಿಯೆ ಎಂದು ಜೀವಿವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top