Slide
Slide
Slide
previous arrow
next arrow

ಬಡ ವಿದ್ಯಾರ್ಥಿನಿ ಪಾಲಿಗೆ ಬೆಳಕಾದ ಕನ್ನಡಿಗರ ಶಿಕ್ಷಣ ರಕ್ಷಣಾ ವೇದಿಕೆ

300x250 AD

ಶಿರಸಿ: ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳನ್ನ ಗುರುತಿಸಿ ಅವರಿಗೆ ಪಠ್ಯ ಪುಸ್ತಕಗಳನ್ನು ನೀಡಿ ಧನ ಸಹಾಯ ಮಾಡುತ್ತಾ ಶಿಕ್ಷಣಕ್ಕೆ ಉತ್ತೆಜನ ನೀಡಲೆಂದೇ ಹುಟ್ಟಿಕೊಂಡಿರುವ ಕನ್ನಡಿಗರ‌ ಶಿಕ್ಷಣ ರಕ್ಷಣಾ ವೇದಿಕೆ ಜಿಲ್ಲೆಯಾದ್ಯಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತ ಬಂದಿದೆ ಈ ಸಂಘಟನೆ ಉತ್ತರ ಕನ್ನಡಜಿಲ್ಲೆಯಲ್ಲೂ ತನ್ನ ಚಾಪು ಹರಡಿದ್ದು ಬದನಗೋಡ ಪಂಚಾಯತಿ ವ್ಯಾಪ್ತಿಯ ಕಾಳಂಗಿ ಗ್ರಾಮದ ಅತ್ಯಂತ ಕಡು ಬಡತನದ ವಿದ್ಯಾರ್ಥಿನಿಯೊರ್ವಳನ್ನು ಗುರುತಿಸಿ ಅವಳಿಗೆ 5 ಸಾವಿರ ರೂ ಸಹಾಯಧನ ಶಾಲಾ ಬ್ಯಾಗ್ ವರ್ಷಕ್ಕೆ ಬೇಕಾಗುವಷ್ಟು ಪಟ್ಟಿ ಇತರೆ ಪಠ್ಯ ಪರಿಕರಗಳನ್ನು ನೀಡುವುದರ ಜೊತೆಗೆ ಮುಂದಿನ ವಿದ್ಯಾಭ್ಯಾಸದ ನೋಡಿಕೊಳ್ಳುವ ಭರವಸೆ ನೀಡಿತು.
ತಂದೆಯನ್ನ ಕಳೆದುಕೊಂಡು ಕೂಲಿಮಾಡುವ ತಾಯಿಯೊಂದಿಗೆ ಟಾರಪಲ್ ಗೋಡೆ ಟಾರಪಲ್ ಚಾವಣಿ ಮನೆಯಲ್ಲಿ ವಾಸಿಸುತ್ತ ತಾಯಿಯ ಕಷ್ಟ ನೋಡದೆ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಲು ಮುಂದಾಗಿದ್ದ ಕು.ಜಯಮ್ಮ ಪಕ್ಕಿರಪ್ಪ ಹಲಗೇರ ದಾಸನಕೊಪ್ಪ ಮಲೆನಾಡು ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದಾಳೆ. ಈಕೆ ಮುಂದೆ ಓದಲಾಗದೆ ಶಾಲೆ ಬಿಡುತ್ತಾಳೆ ಎಂಬ ಸುದ್ದಿ ತಿಳಿದ ಕನ್ನಡಿಗರ ಶಿಕ್ಷಣ ರಕ್ಷಣಾ ವೇದಿಕೆಯ ಪ್ರಮುಖರ ತಂಡ ಕಾಳಂಗಿ ಗ್ರಾಮಕ್ಕೆ ಆಗಮಿಸಿ ವಿದ್ಯಾರ್ಥಿನಿಗೆ ಸಹಾಯಮಾಡಿತು.

ವೇದಿಕೆಯ ಮುಖಂಡರಾದ ಶರತ್ ಕುಮಾರ ಬಿಸಲಕೊಪ್ಪ.ಅಬ್ದುಲ್ ಎ.ಬೆಳ್ಳನಕೇರಿ, ಕಿರಣ ಕಾಳಂಗಿ, ಅರುಣ ವದ್ದಲ, ರಾಘವೇಂದ್ರ ಬೊಚವಳ್ಳಿ, ಪೃಥ್ವಿ ಚಿಪಗಿ, ಸೋಮೇಶ ಗೌಡ, ದೀಪಕ ಗೌಡ, .ಅಜಿತ ಉಪ್ಪಳೆಕೊಪ್ಪ ಉಪಸ್ಥಿತರಿದ್ದು ವಿದ್ಯಾರ್ಥಿನಿಗೆ ಸಹಾಯ ಮಾಡಿದರು. ಅಲ್ಲದೇ ಈ ರೀತಿಯ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಮುಂದೆ ಕೂಡ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಚಿತ್ರ ನಟ, ನಿರ್ಮಾಪಕ ನಿರಂತ ಅಭಿ ಈ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top