Slide
Slide
Slide
previous arrow
next arrow

ಅದ್ದೂರಿಯಾಗಿ ನಡೆದ ಸೋನಾರಕೇರಿ ಶಾಲಾ ಸ್ನೇಹ ಸಮ್ಮೇಳನ

300x250 AD

ಭಟ್ಕಳ: ಇಲ್ಲಿನ ಸೋನಾರಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಇತ್ತೀಚಿಗೆ ಪ್ರಥಮ ಬಾರಿಗೆ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. 20 ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮದ ಆಯೋಜನೆ ಶಾಲಾ ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು. ನಿರೀಕ್ಷೆಗೂ ಮೀರಿ ಸಾರ್ವಜನಿಕರು, ಪಾಲಕರು- ಪೋಷಕರು, ಹಳೇ ವಿದ್ಯಾರ್ಥಿಗಳ ಉಪಸ್ಥಿತಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿತು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಶಾಲಾ ಮಕ್ಕಳಿಂದ ಪ್ರಾರ್ಥನ ಗೀತೆ ಹಾಡಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಯಲ್ಲಮ್ಮ ಮರಿಸ್ವಾಮಿ ಸರ್ವರನ್ನು ಸ್ವಾಗತಿಸಿದರು. ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಗೋವಿಂದ ಜೆ.ನಾಯ್ಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗುವಂಥದ್ದು. ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ಧೈರ್ಯ, ಆರ್ಥಿಕ ಬಲ ಅತ್ಯಗತ್ಯ. ಪ್ರತಿವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಎಂದು ಹೇಳುತ್ತಾ, ಹಳೇ ವಿದ್ಯಾರ್ಥಿಗಳ ಸಹಕಾರಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು. ಈ ಶಾಲೆಯ ವಿದ್ಯಾರ್ಥಿಯಾದ ತಾವು ಈ ವೇದಿಕೆ ಮೇಲೆ ಕಾರ್ಯಕ್ರಮ ಉದ್ಘಾಟಿಸುವುದು ಹಮ್ಮೆ ಎನಿಸುತ್ತಿದೆ ಎಂದರು.

ಮಕ್ಕಳ ಸುಪ್ತ ಶಕ್ತಿಯ ಅನಾವರಣಕ್ಕೆ ‘ಜ್ಞಾನ ಪರ್ವ’ ಎಂಬ ಹೊತ್ತಿಗೆಯನ್ನು ನಾಮಧಾರಿ ಸಂಘ ಅಧ್ಯಕ್ಷರು ಹಾಗೂ ಎಸ್‌ಡಿಎಮ್‌ಸಿ ಸದಸ್ಯರಾಗಿರುವ ಕೃಷ್ಣ ನಾಯ್ಕ ಆಸರಕೇರಿ ಬಿಡುಗಡೆಗೊಳಿಸಿ, ಈ ಶಾಲೆಗೆ ಉತ್ತಮ ಮುಖ್ಯೋಪಾಧ್ಯಾಯರು ಬಂದಿರುವುದು ಸುಯೋಗವೇ ಸರಿ. ಹೊಸ ಮುಖ್ಯೋಪಾಧ್ಯಾಯರಿಂದ ಶಾಲೆ ಹೊಸ ಪ್ರಥಮಗಳನ್ನು ಕಂಡಿದೆ. ಶಾಲಾ ಶೈಕ್ಷಣಿಕ ಪ್ರವಾಸ, ವಿಭಾಗಮಟ್ಟದ ಕ್ರೀಡಾಕೂಟ, ಧ್ವಜದ ಕಟ್ಟೆ ನಿರ್ಮಾಣ, ಇಂಟರ್‌ನೆಟ್ ಅಳವಡಿಕೆ, ಸ್ಮಾರ್ಟ್ಕ್ಲಾಸ್ ಸದುಪಯೋಗ ಸಾಧ್ಯವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಹಳೇ ವಿದ್ಯಾರ್ಥಿಗಳ ಶ್ರಮ ಅಭಿನಂದನಾರ್ಹ ಎಂದ ಅವರು, ಮಕ್ಕಳ ಕ್ರಿಯಾಶೀಲತೆಯನ್ನು ಹೊತ್ತಿಗೆಯ ಮುಖಾಂತರ ಪರಿಚಯಿಸುವುದು ಸಂತೋಷವೆನಿಸುತ್ತಿದೆ ಎಂದರು.

300x250 AD

ಮುಖ್ಯ ಅಥಿತಿಗಳಾಗಿ ಪುರಸಭೆ ಸದಸ್ಯ ರಾಘವೇಂದ್ರ ಪಿ.ಶೇಟ್, ಎಸ್‌ಡಿಎಮ್‌ಸಿಯ ವೆಂಕಟೇಶ ನಾಯ್ಕ ಉಪಸ್ಥಿತರಿದ್ದರು. ರಾಮಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿಗಳಿಂದ ಈ ಹಿಂದೆ ಕಲಿಸಿದ ಹಾಗೂ ಈಗ ಕಲಿಸುತ್ತಿರುವ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾರ್ಚ್ 2022ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿ ಉತ್ತೀರ್ಣರಾದ ಹಾಗೂ 10ನೇ ತರಗತಿಯ ಕಲಿಕೆ ಹಾಗೂ ಇತರೆ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗೈದ ಮಕ್ಕಳಿಗೆ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ನಗದು ಬಹುಮಾನ ನೀಡಲಾಯಿತು. ಕ್ರೀಡೆ ಹಾಗೂ ಸಹಪಠ್ಯ ಚಟುವಟಿಗಳಲ್ಲಿ ವಿಜೇತರಾದ ಮಕ್ಕಳಿಗೆ ಹಳೇ ವಿದ್ಯಾರ್ಥಿಗಳು ಪ್ರಶಸ್ತಿ ವಿತರಿಸಿ, ಅಭಿನಂದಿಸಿದರು. ಶಾಲೆಯ ವರದಿಯನ್ನು ಶಿಕ್ಷಕ ಮಂಜುನಾಥ ನಾಯಕ ವಾಚಿಸಿದರು. ಭಾರತಿ ಎಚ್.ನಾಯಕ ಎಲ್ಲರನ್ನು ವಂದಿಸಿದರು. ಶಿಕ್ಷಕರಾದ ಸವಿತಾ ನಾಯ್ಕ ಹಾಗೂ ರವಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸರ್ವರನ್ನು ಮನರಂಜಿಸಲಾಯಿತು.

Share This
300x250 AD
300x250 AD
300x250 AD
Back to top