• Slide
    Slide
    Slide
    previous arrow
    next arrow
  • ಬೈಕ್-ಸ್ಕಾರ್ಪಿಯೋ ನಡುವೆ ಡಿಕ್ಕಿ: ಶಿರಸಿ‌ ಮೂಲದ ವ್ಯಕ್ತಿ ದುರ್ಮರಣ

    300x250 AD

    ಉಜಿರೆ: ಉಜಿರೆಯ ಸಮೀಪದ ನಿಡಿಗಲ್ ಎಂಬಲ್ಲಿ ಸ್ಕಾರ್ಪಿಯೋ ವಾಹನ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಉಜಿರೆ ಕೇಲಂಗಿ ನಿವಾಸಿ ಅಶೋಕ ರಾಮಚಂದ್ರ ಹೆಗಡೆ (55) ನಿಧನರಾಗಿದ್ದಾರೆ.

    ಶಿರಸಿ ತಾಲೂಕಿನ ಹೂತನಜಾನ್ಮನೆ ಮೂಲದ ಅಶೋಕ ಹೆಗಡೆ ಮುಂಡಾಜೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ಕಳೆದ 25 ವರ್ಷಗಳಿಗೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದು, ಉಜಿರೆಯಲ್ಲಿ ಸುಮಾರು 45 ವರ್ಷದಿಂದ ವಾಸವಾಗಿದ್ದರು.

    ಮಂಗಳವಾರ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಸ್ಕಾರ್ಪಿಯೋ ವಾಹನ ಬಂದು ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಅಶೋಕ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೇ ಮೃತಪಟ್ಟಿದ್ದಾರೆ.

    300x250 AD

    ಅಶೋಕ ಅವರು ತಂದೆ, ತಾಯಿ, ಪತ್ನಿ, ಪುತ್ರ, ಸಹೋದರ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top