ಹೊನ್ನಾವರ: ನಶಿಸುವಂತಹ ವಾಲಿಬಾಲ್ ಕ್ರೀಡೆಯನ್ನು ಉತ್ತೇಜಿಸುವ ಕಾರ್ಯ ಎಲ್ಲರಿಂದಲೂ ನಡೆಯಬೇಕಿದೆ ಎಂದು ಗ್ರಾ.ಪಂ.ಸದಸ್ಯ ಸುರೇಶ ಶೆಟ್ಟಿ ಹೇಳಿದರು.
ಸಮಾನ ಮನಸ್ಕ ಕೆರೆಕೋಣ ಬಳಗ ಇವರು ಕೆರೆಕೋಣ ದಿ.ಮಂಜು ಭಟ್ ಕ್ರೀಡಾಂಗಣದಲ್ಲಿ ಆಯೋಜಿಸಿದ ತಾಲೂಕ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣದ ಜೊತೆ ಕ್ರೀಡೆಯಿಂದಲೂ ಸಾಧನೆ ಮಾಡಲು ಸಾಧ್ಯವಿದೆ. ಪ್ರತಿನಿತ್ಯ ಬಿಡುವ ಸಮಯದಲ್ಲಿ ಆಡುವ ಆಟದ ಹಬ್ಬದಂತೆ ಸಂಘಟಕರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾಂಗಣ ಉದ್ಘಾಟಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಇಡೀ ಕ್ಷೇತ್ರದ ನಾಡಿಮಿಡಿತ ಇರುವುದು ಕೆರೆಕೋಣ ಎಂದರೆ ತಪ್ಪಾಗಲಾರದು. ಜಗತ್ತಿಗೆ ಕಾಡಿದ ಕೋವಿಡ್ ಭಯ ಹೊರಹಾಕುವ ಕಾರ್ಯ ಅಂದು ಯುವಕ ಸಂಘಗಳು ಮುಂದಾಗಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದರು. ಅಂದಿನಿOದ ಇಂದಿನವರೆಗೂ ಪ್ರತಿನಿತ್ಯ ಹಲವು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಇದರಿಂದ ಜನತೆಗೆ ಮನೊರಂಜನೆಯ ಜೊತೆಗೆ ಒಗ್ಗಟ್ಟಿನ ಮನೋಭಾವ ಮೂಡುತ್ತಿದೆ ಎಂದರು.
ಟ್ರೊಪಿ ಅನಾವರಣಗೊಳಿಸಿದ ಸಮಾಜ ಸೇವಕರಾದ ಸಂದೀಪ ಪೂಜಾರಿ ಮಾತನಾಡಿ ಒಬ್ಬ ಕ್ರೀಡಾಪಟು ಸಿದ್ದವಾಗುವುದು ಇನ್ನೊಂದು ಕ್ರೀಡಾಪಟುವಿನಿಂದಲೇ ಆಗಿದೆ. ಇಂದು ಕ್ರೀಡಾಪಟುಗಳ ಸಾಧನೆ ಗುರುತಿಸಿ ಗೌರವಿಸಬೇಕಾಗಿದೆ. ಕ್ರೀಡೆ, ಶಿಕ್ಷಣ,ಆರೊಗ್ಯ ಕ್ಷೇತ್ರದಲ್ಲಿ ಸಮಸ್ಯೆ ಇದ್ದವರನ್ನು ಗುರುತಿಸಿ ನೆರವಾಗಬೇಕಾಗಿರುದು ಸಂಘಟನೆಯ ಮುಖ್ಯ ಧೈಯವಾಗಿರಲಿ. ಕಳೆದ 40 ವರ್ಷದಿಂದ ಯಶ್ವಸಿಯಾಗಿ ಕಾರ್ಯಕ್ರಮ ಸಂಘಟಿಸುವ ಜೊತೆ ಸಾಧಕರನ್ನು ಗುರುತಿಸುವ ಕಾರ್ಯ ಮಾದರಿಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಅಂಗನವಾಡಿ ಶಿಕ್ಷಕರಾದ ಶೈಲಾ ಹೆಗಡೆ, ವಾಲಿಬಾಲ್ ಆಟಗಾರರಾದ ಗಣಪತಿ ಜೋಶಿ, ರಾಜುನಾಯ್ಕ, ಮಹೇಶ ನಾಯ್ಕ ಇವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಸಚೀನ ನಾಯ್ಕ, ಸದಸ್ಯ ಗಣಪತಿ ಭಟ್, ಉದ್ಯಮಿದಾರರಾದ ಗಣೇಶ ಜೋಗಿ, ಶಿಕ್ಷಕರಾದ ಐ.ಆರ್.ಭಟ್, ಊರ ಮುಖಂಡರಾದ ನಾರಾಯಣ ಮರಾಠಿ, ಸಂಘಟಕರಾದ ಮಹೇಶ ಭಂಡಾರಿ ಉಪಸ್ಥಿತರಿದ್ದರು. ಕೇಶವ ಶೆಟ್ಟಿ ಸ್ವಾಗತಿಸಿ, ರಾಮ ಭಂಡಾರಿ ವಂದಿಸಿದರು.