Slide
Slide
Slide
previous arrow
next arrow

5 ಕೋಟಿ ವೆಚ್ಚದ ನಾಗೋಡಾ ಸೇತುವೆಗೆ ದೇಶಪಾಂಡೆ ಚಾಲನೆ

300x250 AD

ಜೊಯಿಡಾ: ತಾಲೂಕಿನ ನಾಗೋಡಾದಲ್ಲಿ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ನಾಗೋಡಾ ಸೇತುವೆಯನ್ನು ಶಾಸಕ ಆರ್.ವಿ.ದೇಶಪಾಂಡೆ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಇಲಾಖೆ, ಕುಡಿಯುವ ನೀರು ಸರಬರಾಜು ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ ಎನ್ನುವುದು ನಿರಂತರವಾಗಿ ಇರಬೇಕು. ಅಭಿವೃದ್ಧಿಗೆ ಪೂರ್ಣ ವಿರಾಮ ಇಲ್ಲ. ಯಾರು ಅಭಿವೃದ್ಧಿ ಮಾಡುತ್ತಾರೋ, ನಿಮ್ಮ ತಾಲೂಕಿನ ಏಳಿಗೆಗಾಗಿ ದುಡಿದಿದ್ದಾರೋ ಅಂಥವರಿಗೆ ಮುಂಬರುವ ಚುನಾವಣೆಯಲ್ಲಿ ಮತ ನೀಡಿ. ನಾಗೋಡಾ ಗ್ರಾಮದ ಜನರಿಗೆ ಮಳೆಗಾಲದಲ್ಲಿ ಸುಪಾ ಹಿನ್ನೀರಿನಿಂದಾಗಿ ಸಮಸ್ಯೆ ಆಗುತ್ತಿತ್ತು ಹೊಸ ಸೇತುವೆ ನಿರ್ಮಾಣವಾದ ಕಾರಣ ಈ ಭಾಗದ ಜನರಿಗೆ ಈಗ ಸಮಸ್ಯೆ ಆಗುವುದಿಲ್ಲ. ಈಗಾಗಲೇ ಜೊಯಿಡಾ ತಾಲೂಕಿಗೆ ಸಾಕಷ್ಟು ಅನುದಾನವನ್ನು ತಂದಿದ್ದೇನೆ ಎಂದರು.
ಎಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೋ ಅಲ್ಲಿ ಜನರು ಕೆಲಸವನ್ನು ಗಮನಿಸಬೇಕು. ಕೆಲಸ ಕಳಪೆ ಆದಲ್ಲಿ ತಕ್ಷಣ ತಿಳಿಸಿ ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಊರಿನ ಸ್ಥಳೀಯರು ತಿಳಿಸಬೇಕು. ನಾಗೋಡಾ ಭಾಗದಲ್ಲಿ ದಿಗಂಬರ ದೇಸಾಯಿ, ವಿನಯ ದೇಸಾಯಿಯಂತಹ ಉತ್ತಮ ನಾಯಕರಿದ್ದಾರೆ. ಯಾವುದೇ ಸಮಸ್ಯೆ ಇದ್ದಲ್ಲಿ ಅವರಿಗೆ ತಿಳಿಸಿ ಎಂದರು.
ನಾಗೋಡಾ ಗ್ರಾಮ ಪಂಚಾಯತ ಅಧ್ಯಕ್ಷ ದಿಗಂಬರ ದೇಸಾಯಿ ಮಾತನಾಡಿ, ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಗೆ 21 ಕೋಟಿ ಅನುದಾನವನ್ನು ಶಾಸಕರು 5 ವರ್ಷಗಳಲ್ಲಿ ನೀಡಿದ್ದಾರೆ. ನಮ್ಮ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ, ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತಾಲೂಕಿನ ಎಲ್ಲಾ ಅಭಿವೃದ್ಧಿಗಳನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕಾಂಗ್ರೆಸ್ ಪಕ್ಷದ ರಮೇಶ ನಾಯ್ಕ,ರವಿ ರೆಡ್ಕರ್,ಸದಾನಂದ ದಬ್ಗಾರ,ಮಂಗೇಶ ಕಾಮತ್, ಮಂಜುನಾಥ ಮೋಕಾಶಿ, ದತ್ತಾ ನಾಯ್ಕ, ಅರುಣ ದೇಸಾಯಿ, ಶ್ರೀಧರ ದಬ್ಗಾರ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top