ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕಿನ ಬಾಡ ವಲಯದ ಗುಡೇಅಂಗಡಿ ಕಾರ್ಯಕ್ಷೇತ್ರದ ಗಿಂಡಿದೇವಾ ಸ್ವಸಹಾಯ ಸಂಘದ ಸದಸ್ಯೆ ಕಲ್ಪನಾ ಮಡಿವಾಳ ಗೇರು ಬೀಜದ ಫ್ಯಾಕ್ಟರಿ ಅಭಿವೃದ್ಧಿಪಡಿಸಲು ಸ್ವಸಹಾಯ ಸಂಘದಿಂದ 2022ರ ಜೂ.3ರಂದು ರೂ.5 ಲಕ್ಷ ಸಿಡ್ಬಿ ಪ್ರಗತಿನಿಧಿಯನ್ನು ಪಡೆದುಕೊಂಡಿದ್ದರು. 2022ರ ಅ.6ರಂದು ಅವರ ಪ್ರಗತಿನಿಧಿಯ ವಿನಿಯೋಗದಾರ ದತ್ತಾತ್ರೇಯ ಮಡಿವಾಳ ಅನಾರೋಗ್ಯದಿಂದ ತೀರಿಕೊಂಡಿದ್ದು, ಇವರು ಪ್ರಗತಿನಿಧಿ ಪಡೆಯುವ ಸಂದರ್ಭ ಪ್ರಗತಿ ರಕ್ಷಾ ಕವಚ ವಿಮೆ ಮಾಡಿಸಿರುವುದರಿಂದ ಅದರಡಿಯಲ್ಲಿ ರೂ.4.79 ಲಕ್ಷ, ಸಂಪೂರ್ಣ ಸುರಕ್ಷಾ ರ್ಯಕ್ರಮದಡಿಯಲ್ಲಿ ದತ್ತಾತ್ರೇಯ ಮಡಿವಾಳರವರ ಆಸ್ವತ್ರೆ ಖರ್ಚು ರೂ.60 ಸಾವಿರ ಹಾಗೂ ಜೀವನ ಮಧುರ ಡೆತ್ ಕ್ಲೈಮ್ ರೂ.14 ಸಾವಿರ, ಒಟ್ಟು 5.53 ಲಕ್ಷ ಮೊತ್ತವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಚೆಕ್ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉತ್ತರಕನ್ನಡ ಜಿಲ್ಲೆಯ ನಿರ್ದೇಶಕ ಮಹೇಶ್ ಎಂ.ಡಿ., ಯೋಜನಾಧಿಕಾರಿಗಳಾದ ಕಲ್ಮೇಶ್ ಹಾಗೂ ನಾರಾಯಣ ಪಟಗಾರ ಮತ್ತು ವಲಯದ ಮೇಲ್ವಿಚಾರಕ ಕೇಶವ ಇದ್ದರು.