ದಾಂಡೇಲಿ: ನಗರದ ಸ್ಥಳೀಯ ಗಾಂಧಿನಗರದಲ್ಲಿ ಸರಸ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ- ಸಡಗರದಿಂದ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯೆ ರುಕ್ಮಿಣಿ ಬಾಗಾಡೆ, ಕಳೆದ 20 ವರ್ಷಗಳಿಂದ ಅನ್ಯೋನ್ಯತೆಯಿಂದ ಪರಸ್ಪರ ಸೌಹಾರ್ದತೆಯಿಂದ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವುದು ಅಭಿನಂದನೀಯ. ಈ ಸಂಘದ ಮೂಲಕ ಸಂಘದ ಸದಸ್ಯರು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿಯೆಡೆಗೆ ಸಾಗಿರುವುದು ಸಂಘದ ಬಹುದೊಡ್ಡ ಸಾಧನೆ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಾತನಾಡಿ, ಸ್ವಸಹಾಯ ಸಂಘಗಳು ಪರಸ್ಪರ ನಂಬಿಕೆಯ ತತ್ವದಡಿ ಮುನ್ನಡೆಯುತ್ತಿದೆ. ಇಲ್ಲಿ ಪರಸ್ಪರ ನಂಬಿಕೆಯೇ ಮೂಲ ಆಧಾರ. ಈ ನಂಬಿಕೆಯನ್ನು 20 ವರ್ಷಗಳಿಂದ ಉಳಿಸಿ ಮುನ್ನಡೆಯುತ್ತಿರುವ ಸರಸ್ವತಿ ಸ್ತ್ರೀಶಕ್ತಿ ಸಂಘದ ಸರ್ವ ಸದಸ್ಯರ ಒಗ್ಗಟ್ಟು ಶ್ಲಾಘನೀಯ ಎಂದರು.
ಸರಸ್ವತಿ ಸ್ತ್ರೀಶಕ್ತಿ ಸಂಘದ ವಸಂತಾ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಘಸ್ತಿ ಮೆಮೋರಿಯಲ್ ಟ್ರಸ್ಟಿನ ಸಿದ್ದರಾಜು ಘಸ್ತಿ, ಶ್ರಮ ಸಂಸ್ಥೇಯ ಅಧ್ಯಕ್ಷರಾದ ಗೀತಾ, ಪ್ರಮುಖರಾದ ರೇಣುಕಾ ಮದಾರ ಮೊದಲಾದವರು ಉಪಸ್ಥಿತರಿದ್ದರು.