• Slide
    Slide
    Slide
    previous arrow
    next arrow
  • ಲಲಿತಕಲೆಗಳು ಮಾನಸಿಕ ನೆಮ್ಮದಿ ನೀಡಿ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕಾರಿ: ಪ್ರಸನ್ನ ಪ್ರಭು

    300x250 AD

    ಭಟ್ಕಳ: ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ಎಂದು ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಕರೆ ನೀಡಿದರು.
    ನಾಗಯಕ್ಷೆ ಸಭಾಭವನದಲ್ಲಿ ಝೇಂಕಾರ್ ಆರ್ಟ್ ಅಸೋಸಿಯೇಶನ್ ಹಾಗೂ ಕನ್ನಡ & ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಝೇಂಕಾರ್ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
    ಸಂಜಯ ಗುಡಿಗಾರ ನಿರ್ದೇಶನದಲ್ಲಿ ಏರ್ಪಡಿಸಲಾದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪದ್ಮನಾಭ ಪೈ, ಇಂತಹ ಕಲಾ ಉತ್ಸವಗಳನ್ನು ಮೊದಲು ಪ್ರಾರಂಭಿಸದ್ದೇ ಝೇಂಕಾರ ಸಂಸ್ಥೆಯವರು. ಕಲಾ ಸೇವೆಯಲ್ಲಿ ಅವರ ಕಾರ್ಯ ಶ್ಲಾಘನಾರ್ಹ ಎಂದರು.
    ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಲಲಿತಕಲೆಗಳು ಮಾನಸಿಕ ನೆಮ್ಮದಿಯನ್ನು ನೀಡಿ ವ್ಯಕ್ತಿತ್ವ ವಿಕಸನಗೊಳಿಸುವ ಜೊತೆಗೆ ಶಿಕ್ಷಣಕ್ಕೂ ಸಹಕಾರಿಯಾಗಿವೆ, ಎನ್ನುತ್ತಾ ಸಂಸ್ಥೆಯ ಸಾಧನೆಯನ್ನು ವಿವರಿಸಿದರು.
    ಕಲಾ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಯನ್ನು ಗಮನಿಸಿ ಖ್ಯಾತ ತಬಲಾ ವಾದಕ ಶೇಷಾದ್ರಿ ಅಯ್ಯಂಗಾರ ಅವರನ್ನು ‘ಝೇಂಕಾರ ಕಲಾಶ್ರೀ 2023’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
    ಸಂಜಯ ಗುಡಿಗಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ, ಅತಿಥಿಗಳಾಗಿ ಆಗಮಿಸಿದ ಆಶಾ ಭಟ ಸಾಂದರ್ಭಿಕ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದ ನಂತರ ಸಂಜಯ ಗುಡಿಗಾರ ಅವರ ನಿರ್ದೇಶನದಲ್ಲಿ ಚಿತ್ರಕಲಾ ಪ್ರದರ್ಶನ, ನೃತ್ಯ ವಿದುಷಿ ನಯನಾ ಪ್ರಸನ್ನ ನಿರ್ದೇಶನದಲ್ಲಿ ನೃತ್ಯವೈವಿಧ್ಯ, ಸಂಗೀತ ಶಿಕ್ಷಕ ವೆಂಕಟೇಶ ಭಟ್ ಇವರ ನಿರ್ದೇಶನದಲ್ಲಿ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಾರಂಭದಲ್ಲಿ ಕಲಾವಿದ ರಾಮದಾಸ ದೇವಡಿಗ ಸ್ವಾಗತಿಸಿದರೆ ಕೊನೆಯಲ್ಲಿ ಸಂಜಯ ಗುಡಿಗಾರ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top