• Slide
    Slide
    Slide
    previous arrow
    next arrow
  • ಸಮಸ್ಯೆಗೆ ಸ್ಪಂದಿಸುವ ಶಿಕ್ಷಣಾಧಿಕಾರಿ‌ ಶಿಕ್ಷಕ‌ ಸಮುದಾಯಕ್ಕೆ ಹಿರಿಯಣ್ಣನಂತೆ: ಪ್ರಮೋದ್‌ ಮಹಾಲೆ

    300x250 AD

    ದಾಂಡೇಲಿ: ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಡಿ ನಗರದ ಕನ್ಯಾ ವಿದ್ಯಾಲಯದಲ್ಲಿ ಗುರುಸ್ಪಂದನ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ತಮ್ಮನ್ನು ತಾವು ಸಮರ್ಪಣಾಭಾವದಿಂದ ತೊಡಗಿಸಿಕೊಳ್ಳುತ್ತಿರುವ ಶಿಕ್ಷಕ ವೃಂದದವರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಲಾಖೆ ಮಟ್ಟದಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದು ಸಮಸ್ಯೆಗಳ ಪರಿಹಾರಕ್ಕೆ ಒತ್ತುಕೊಡುವುದೆ ಈ ಕಾರ್ಯಕ್ರಮದ ಆಶಯವಾಗಿದೆ. ಶಿಕ್ಷಕ ವೃಂದ ಮತ್ತು ಶಿಕ್ಷಣ ಇಲಾಖೆಯ ನಡುವೆ ಅನ್ಯೋನ್ಯತೆ ಸಂಬಂಧವಿದ್ದಾಗ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ಸಾಗಲು ಸಾಧ್ಯ ಎಂದರಲ್ಲದೇ, ಈ ಕಾರ್ಯಕ್ರಮ ಶಿಕ್ಷಕರಲ್ಲಿ ನವೋಲ್ಲಾಸವನ್ನು ತರುವ ಕಾರ್ಯಕ್ರಮವಾಗಿ ಮೂಡಿ ಬರಲೆಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯವಸ್ಥಾಪಕ ಪಶುಪತಿಹಾಳ, ಇಂದು ಕಾಲಕಾಲಕ್ಕೆ ಬರುವ ಮಾಹಿತಿಗಳು, ಆ ಮಾಹಿತಿಗಳಿಗೆ ಅನುಗುಣವಾಗಿ ಸ್ಪಂದಿಸುವಿಕೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡುವ ಮೂಲಕ ಶಿಕ್ಷಕರು ಇಲಾಖೆಯ ಘನತೆಯನ್ನು ಎತ್ತಿ ಹಿಡಿಯುವ ಕರ‍್ಯ ಮಾಡುತ್ತಿರುವುದನ್ನು ಅಭಿನಂದಿಸಿದರು.
    ಪ್ರಾಸ್ತಾವಿಕವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸತೀಶ ನಾಯಕ ಬಾವಿಕೇರಿ ಮಾತನಾಡಿ, ಶಿಕ್ಷಕರ ಬಳಗದ ಸಮಸ್ಯೆಗಳನ್ನು ಮುಕ್ತವಾಗಿ ಪರಿಹರಿಸಿಕೊಳ್ಳಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ತಡವರಿಯದೇ ಸ್ಪಂದಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಿಕ್ಷಕ ಸಮುದಾಯಕ್ಕೆ ಹಿರಿಯಣ್ಣನಂತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
    ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿಯರ ಪ್ರಾರ್ಥನೆಯ ಮೂಲಕ ಆರಂಭಗೊಂಡ ಕಾರ‍್ಯಕ್ರಮಕ್ಕೆ ಶಿಕ್ಷಕರ ಸಂಘದ ಕಾರ‍್ಯದರ್ಶಿ ಪ್ರವೀಣ್ ನಾಯಕ ಸ್ವಾಗತಿಸಿದರು. ಸಿಆರ್‌ಪಿ ಲಲಿತಾ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಯು.ಎಸ್.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಅಧೀಕ್ಷಕ ನಾರಾಯಣ ಬಡಿಗೇರ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ದಾಂಡೇಲಿ ಅಧ್ಯಕ್ಷ ಸುರೇಶ ನಾಯಕ, ಹಳಿಯಾಳ ಅಧ್ಯಕ್ಷ ಪ್ರಶಾಂತ ನಾಯ್ಕ, ಕನ್ಯಾ ವಿದ್ಯಾಲಯದ ಪ್ರಾಚಾರ್ಯ ಹನುಮಂತ ಕುಂಬಾರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸುಲೇಮಾನ್ ಶೇಖ, ಮಮತಾ, ವಿಜಯಲಕ್ಷ್ಮಿ ಮುರುಗೇಶ್, ವೆಂಕಟೇಶ್ ನಾಯ್ಕ, ಪರೀದ್ ಶೇಖ, ನಾಜಿಯಾ ಶೇಖ, ಶಿಕ್ಷಕರ ಸಂಘದ ಕಾರ್ಯದರ್ಶಿ ಉದಯ ನಾಯ್ಕ, ಸಿಆರ್‌ಪಿಗಳಾದ ಲಲಿತಾ ನಾಯ್ಕ ಮತ್ತು ಶ್ರೀದೇವಿ ಮೊದಲಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top