• Slide
    Slide
    Slide
    previous arrow
    next arrow
  • ಶಾಸಕಿ ರೂಪಾಲಿ, ಸಂಸದ ಹೆಗಡೆಯಿಂದ ವಿಜಯ ದಿವಸಕ್ಕೆ ಹೊಸ ಆಯಾಮ: ಸಚಿವ ಪೂಜಾರಿ

    300x250 AD

    ಕಾರವಾರ: ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಸೋದೆ ಸದಾಶಿವರ ರಾಯರು ಪ್ರಥಮ ಬಾರಿಗೆ ಬ್ರಿಟೀಷ್ ಧ್ವಜವನ್ನು ಕೆಳಗಿಳಿಸಿದ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಾಸಕಿ ರೂಪಾಲಿ ನಾಯ್ಕ ಮತ್ತು ಸಂಸದ ಅನಂತಕುಮಾರ್ ಹೆಗಡೆ ಈ ಸಂದರ್ಭಕ್ಕೆ ಹೊಸ ಆಯಾಮ ಕೊಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಂತಸ ವ್ಯಕ್ತಪಡಿಸಿದರು.
    ಮೊಟ್ಟ ಮೊದಲ ಬಾರಿಗೆ ಬ್ರಿಟಿಷ್ ಧ್ವಜವನ್ನು ಇಳಿಸಿದ ಸೋಂದೆ ಅರಸ ರಾಜಾ ಸದಾಶಿವರಾಯರ ಸ್ವಾತಂತ್ರ‍್ಯ ಹೋರಾಟದ ಸವಿನೆನಪಿಗಾಗಿ ವಿಜಯ ದಿವಸದ ಆಚರಣೆಯು ತಾಲ್ಲೂಕಿನ ಕಡವಾಡ ಗ್ರಾಮದ ನಂದವಾಳದಲ್ಲಿ ಭಗವಾಧ್ವಜವನ್ನ ಆರೋಹಣ ಮಾಡಿ, ವೇದಿಕೆ ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವತಂತ್ರ ಭಾರತದ ಕಲ್ಪನೆಯ ಕನಸುಗಳೆಲ್ಲ ನನಸಾಗಿರುವ ಈ ಕ್ಷಣದಲ್ಲಿ ಸೋದೆ ಸದಾಶಿವ ರಾಯರಂಥ ಹಿರಿಯರು ಕಟ್ಟಿದ ಈ ನೆಲದಲ್ಲಿ, ಮಣ್ಣಿನ ಕಣಕಣದಲ್ಲೂ ಸ್ವಾತಂತ್ರ್ಯದ ಕಲ್ಪನೆ ಇದೆ ಎಂಬ ಹೆಮ್ಮೆ ಇದೆ. ಹೆಂಜಾ ನಾಯ್ಕರ ಹೆಸರಿನಲ್ಲಿ ಕಾರವಾರದಲ್ಲಿ ಸೇನಾ ತರಬೇತಿ ಪೂರ್ವ ಶಾಲೆಯನ್ನು ಆರಂಭಿಸಿದ್ದೇವೆ. ಈ ಇಬ್ಬರೂ ಯೋಧರಿಗೆ ಕೊಟ್ಟಿರುವ ಗೌರವದ ಸಂಕೇತವಾಗಿ ಈ ದಿನವನ್ನು ಆಚರಿಸುತ್ತಿದ್ದೇವೆ ಎಂದರು.
    ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಇತಿಹಾಸದಲ್ಲಿ ದೇಶಕ್ಕಾಗಿ ಹೋರಾಡಿದ, ತ್ಯಾಗ ಮಾಡಿದ ಎಷ್ಟೋ ರಾಜರ ಕುರಿತು ಇಂದು ಯಾವುದೇ ಪಠ್ಯ- ಪುಸ್ತಕದಲ್ಲಿ ಅಳವಡಿಸಿಲ್ಲ. ಅಂತಹ ಸಾಕಷ್ಟು ಹೋರಾಟಗಾರರನ್ನು ಮುಚ್ಚಿಟ್ಟಿರುವುದು ನಮಗೆ ಬೇಸರವಿದೆ. ಅಲ್ಲದೇ ರಾಜಕಾರಣವನ್ನು ಹೊರತುಪಡಿಸಿ ದೇಶಕ್ಕಾಗಿ ನಾವೆಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
    ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿದರು. ಆದರ್ಶ ಗೋಕಲೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ಪೊಲೀಸ್ ಅಧಿಕಾರಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ವಿಭಾಗದ ಸಹ ಪ್ರಭಾರಿ ಎನ್.ಎಸ್.ಹೆಗಡೆ, ಕಡವಾಡದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾ ಗೌಡ, ಉಪಾಧ್ಯಕ್ಷ ಅನಂದು ನಾಯ್ಕ, ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರುಡೇಕರ, ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಸುಧಾಕರ ನಾಯ್ಕ ಹಾಗೂ ವಿವಿಧ ಮೋರ್ಚಾದ ಮುಖಂಡರು ಮತ್ತು ಸಾರ್ವಜನಿಕರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top