Slide
Slide
Slide
previous arrow
next arrow

ಸಬಗೇರಿ ಬಳಿ ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುವ ಲಾರಿ ಚಾಲಕರು: ಸಾರ್ವಜನಿಕರ ಅಸಮಾಧಾನ

300x250 AD

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿರುವ ಮುಂಡಗೋಡ್ ರಸ್ತೆ ಸಂಪರ್ಕಿಸುವ ಸಬಗೇರಿ ವೃತ್ತದ ಬಳಿ ಹೆದ್ದಾರಿ ಮೇಲೆ ಸಂಚರಿಸುವ ಭಾರಿ ವಾಹನ ಚಾಲಕರು ಕೃತಕ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದ್ದು, ಪಾದಚಾರಿಗಳು, ಬೈಕ್ ಸವಾರರು ಲಘು ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ.
ಯಲ್ಲಾಪುರ ಗ್ರಾಮದೇವಿಯರ ಜಾತ್ರೆ ಭರದಿಂದ ಸಾಗುತ್ತಿದ್ದು, ಸಂಜೆ ಹೊತ್ತಿನಿಂದ ಮಧ್ಯರಾತ್ರಿವರೆಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಬೆಲ್ ರಸ್ತೆ, ಮುಂಡಗೋಡ ರಸ್ತೆ, ಶಿರಸಿ ರಸ್ತೆ ಸಂಪೂರ್ಣವಾಗಿ ಜನಸಂದಣಿಯಿಂದ ಮುಚ್ಚಿ ಹೋಗಿರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚರಿಸುವ ಭಾರಿ ವಾಹನಗಳನ್ನು ಪುರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ನಿಷೇಧಿಸಲಾದ ಈ ವಾಹನ ಚಾಲಕರು ಸಬಗೇರಿ ವೃತ್ತದ ಬಳಿ ಸಾರ್ವಜನಿಕ ಸಂಚಾರಕ್ಕೆ ಲಘು ವಾಹನ ಸಂಚಾರಕ್ಕೆ ಅಡೆತಡೆಯಾಗುವಂತೆ ತಮ್ಮ ವಾಹನ ನಿಲ್ಲಿಸಿರುವುದರಿಂದ ಬಹಳಷ್ಟು ಜನ ಲಾರಿ ಚಾಲಕರ ಮಧ್ಯೆ ವಾಗ್ವಾದ ನಡೆಯುತ್ತಿದೆ.
ಸಾಮಾನ್ಯ ಬೈಕ್ ಕೂಡ ಸಂಚರಿಸಲಾಗದಂತೆ ಬಾರಿ ವಾಹನ ಚಾಲಕರು, ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಿಟ್ಟು ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡುತ್ತಿದ್ದಾರೆ. ಹಿಂದಿನ ಜಾತ್ರೆಗಳಲ್ಲಿ ಇಂತಹ ಯಾವುದೇ ಸಮಸ್ಯೆ ಬಾರದಂತೆ, ಅಂದಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಗಾ ವಹಿಸುತ್ತಿದ್ದರು. ಸ್ವತಃ ನಿಂತು ಟ್ರಾಫಿಕ್ ನಿಯಂತ್ರಿಸುತ್ತಿದ್ದರು. ಆದರೆ ಈ ವರ್ಷದ ಯಲ್ಲಾಪುರ ಗ್ರಾಮದೇವಿ ಜಾತ್ರೆಯಲ್ಲಿ ಉಳಿದೆಲ್ಲವೂ ಸುರಳಿತವಾಗಿ ನಡೆದರೆ, ವಾಹನಗಳು ಓಡಾಟವನ್ನು ಸುರಳಿತವಾಗಿ ನಿಯಂತ್ರಿಸುವುದಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಪಟ್ಟಣದ ಬೆಲ್ ರಸ್ತೆಯ ಮೂಲಕ ಕಾಮಾಕ್ಷಿ ಆಟೋಮೊಬೈಲ್ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯುದ್ದಕ್ಕೂ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಅಂತರ ಕಾಯ್ದುಕೊಳ್ಳಬೇಕಾಗಿದೆ. ಆದರೆ ಅಂತರ ಕಾಯ್ದುಕೊಳ್ಳದೇ ಹಾಗೂ ವಾಹನಗಳ ನಿಯಂತ್ರಣವಿಲ್ಲದೇ ವೇಗವಾಗಿ ಸಂಚರಿಸುತ್ತೇವೆ ಎನ್ನುವ ಆಪಾದನೆ ಕೂಡ ಕೇಳಿಬಂದಿದೆ. ಸಚಿವ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಜಾತ್ರೆಗೆ ಸಂಬಂಧಿಸಿದಂತೆ ಹಲವಾರು ಪೂರ್ವಭಾವಿ ಸಭೆ ನಡೆದು ವಾಹನಗಳ ಸಂಚಾರವನ್ನು ಹೇಗೆ ನಿಯಂತ್ರಿಸಬೇಕು ಮತ್ತು ಎಲ್ಲಿಂದ ನಿಯಂತ್ರಿಸಬೇಕು ಎನ್ನುವ ಸಲಹೆ ಸೂಚನೆಗಳನ್ನು ನೀಡಲಾಗಿತ್ತು, ಸಾರ್ವಜನಿಕರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಿ ಅದನ್ನು ಜಾರಿಗೆ ತರಲಾಗುವುದು ಎಂದು ಸಮ್ಮತಿ ಕೂಡ ಸೂಚಿಸಲಾಗಿತ್ತು. ಆದರೆ ಸಭೆಯಲ್ಲಿ ನಿರ್ಣಯಿಸಿರುವುದೇ ಬೇರೆ, ಪ್ರಸ್ತುತ ನಡೆಯುತ್ತಿರುವುದೇ ಬೇರೆಯಾಗಿ ಕಂಡುಬರುತ್ತಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಹೊಸದಾಗಿ ಯಲ್ಲಾಪುರ ಠಾಣೆಗೆ ಆಗಮಿಸಿರುವ ಅಧಿಕಾರಿಗಳಿಗೆ ಇಲ್ಲಿಯ ಜಾತ್ರೆಯ ಅನುಭವ ಇರದು, ಆದರೂ ಹಿಂದೆ ಸೇವೆ ಸಲ್ಲಿಸಿದ ಸಿಬ್ಬಂದಿಗಳು ಅಥವಾ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದು ಟ್ರಾಫಿಕ್ ಅನ್ನು ನಿಯಂತ್ರಿಸಬಹುದಾಗಿತ್ತು, ಹಿಂದಿನ ಜಾತ್ರೆಯ ಸಂದರ್ಭದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಗೋಪಾಲಕೃಷ್ಣ ನಾಯಕ, ಅರವಿಂದ ಕಲ್ಗುಜ್ಜಿ, ವಿಜಯ ಬಿರಾದರ, ಪಿಎಸ್‌ಐ ಶ್ರೀಧರ್ ಎಸ್ ಆರ್ ಹಾಗೂ ಅಂದಿನ ಸಿಬ್ಬಂದಿಗಳನ್ನು ಯಲ್ಲಾಪುರದ ಜನತೆ ಇದೀಗ ಜಾತ್ರೆಯ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದೇನೆ ಇದ್ದರು ಕೂಡ ಇನ್ನೂ ಐದು ದಿನ ಜಾತ್ರೆ ನಡೆಯಲಿದೆ ಅದರಲ್ಲಿಯೂ ಜಾತ್ರೆಯ ಕೊನೆಯ ದಿನ ಲಕ್ಷಾಂತರ ಜನ ಯಲ್ಲಾಪುರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಸಮಸ್ಯೆ ಆಗದಂತೆ ಟ್ರಾಫಿಕ್ ನಿಯಂತ್ರಣ ಮಾಡಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

300x250 AD
Share This
300x250 AD
300x250 AD
300x250 AD
Back to top