ಯಲ್ಲಾಪುರ: ಅರಣ್ಯದ ಕಾವಲುಗಾರನೋರ್ವ ಬೆಂಕಿ ನಂದಿಸುವ ಸಂದರ್ಭದಲ್ಲಿ ಹೈವೊಲ್ಟೇಜ್ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ, ದಾರುಣವಾಗಿ ಮೃತಪಟ್ಟಿರುವ ಘಟನೆ ಇಡುಗುಂದಿ ವಲಯ ಅರಣ್ಯ ವ್ಯಾಪ್ತಿಯ ತೆಲಂಗಾರದಲ್ಲಿ ರವಿವಾರ ರಾತ್ರಿ ನಡೆದಿದೆ.
ಅರಣ್ಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ವಜ್ರಳ್ಳಿ ನಿವಾಸಿ ಜೂಜೆ ಲೂಯಿಸ್ ಸಿದ್ದಿ(64), ತೆಲಂಗಾರದ ಗೋಡೆಪಾಲ ಅರಣ್ಯದಲ್ಲಿ ತಗುಲಿದ ಬೆಂಕಿಯನ್ನು ನಂದಿಸುವ ಸಂದರ್ಭದಲ್ಲಿ ಕೆಳಗೆ ತುಂಡಾಗಿ ಬಿದ್ದಿದ್ದ ಅರಣ್ಯದ ಮಧ್ಯ ಹಾದುಹೋದ ಹೈ ಟೆನ್ಶನ್ ವಿದ್ಯುತ್ ಕಂಬದ ತಂತಿಗೆ ಸಂಪರ್ಕಕ್ಕೆ ಬಂದು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.
ಈ ಘಟನೆ ಆಕಸ್ಮಿಕವಾಗಿ ಸಂಭವಿಸಿದ್ದು, ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತನ ಮಗ ಮೋತೇಸ ಜೂಜೆ ಸಿದ್ದಿ ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾನೆ. ಪಿಎಸ್‌ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.