Slide
Slide
Slide
previous arrow
next arrow

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪಿಎಂ ಮೋದಿ ಚಾಲನೆ

300x250 AD

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ತನ್ನದೇ ಆದ ವಿಮಾನ ನಿಲ್ದಾಣ ದೊರೆತಿದೆ. ಈ ಮೂಲಕ ದೀರ್ಘಕಾಲದ ಬೇಡಿಕೆಯೊಂದು ಈಡೇರಿದೆ. ಈ ವಿಮಾನನಿಲ್ದಾಣ ಕರ್ನಾಟಕದ ಪರಂಪರೆ ಮತ್ತು ತಾಂತ್ರಿಕತೆಯ ಅದ್ಭುತ ಸಂಗಮವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ, ಈ ಪ್ರದೇಶದ ಯುವಜನತೆಯ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ಅಭಿಯಾನ. ಇಂದು ರಸ್ತೆ ಮತ್ತು ರೈಲಿಗೆ ಸಂಬಂಧಿಸಿದ ಅನೇಕ ಯೋಜನೆಗಳ ಶಿಲಾನ್ಯಾಸವೂ ನಡೆದಿದೆ. ಹರ್‌ ಘರ್‌ ಜಲ್‌ ಯೋಜನೆಯಡಿ ಕಾರ್ಯ ನಡೆಯುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೆ ಮೋದಿ ಈ ಸಂದರ್ಭ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಅದರ ಗೌರವಾರ್ಥ ಜನರಿಂದ ಮೊಬೈಲ್‌ ಟಾರ್ಚ್‌ ಲೈಟ್‌ ಆನ್‌ ಮಾಡಿಸಿದ್ದಾರೆ.

ಬಿಜೆಪಿ ಸರ್ಕಾರದ ಮೂಲಕ ಕರ್ನಾಟಕದ ಅಭಿವೃದ್ಧಿಯ ರಥ ಶರವೇಗದಲ್ಲಿ ಸಾಗುತ್ತಿದೆ. ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಮೊದಲು ಅಭಿವೃದ್ಧಿ ದೊಡ್ಡ ನಗರಗಳ ಸುತ್ತಮುತ್ತ ಸೀಮಿತವಾಗಿತ್ತು, ಆದರೆ ಇಂದು ಗ್ರಾಮಗಳವೆರಗೂ ಅಭಿವೃದ್ಧಿ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಶಿವಮೊಗ್ಗದ ಅಭಿವೃದ್ಧಿ ಇದೇ ಚಿಂತನೆಯಿಂದ ಪ್ರೇರಿತವಾಗಿದೆ ಎಂದರು..

300x250 AD

ದೇಶದಲ್ಲಿ ವಾಯುಯಾನದ ಬಗ್ಗೆ ಸಾಕಷ್ಟು ಉತ್ಸಾಹ ಇರುವ ಸಂದರ್ಭದಲ್ಲೇ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಗೊಂಡಿದೆ. ಏರ್‌ ಇಂಡಿಯಾ ವಿಮಾನ ಖರೀದಿಗಾಗಿ ವಿಶ್ವದ ಅತಿದೊಡ್ಡ ಒಪ್ಪಂದ ಮಾಡಿಕೊಂಡಿದೆ. ಮೊದಲು ಏರ್‌ ಇಂಡಿಯಾದ ಗುರುತು ನಕಾರಾತ್ಮಕವಾಗಿಯೇ ಇರುತ್ತಿತ್ತು, ಇಂದು ಏರ್‌ ಇಂಡಿಯಾ ಭಾರತದ ಹೊಸ ಸಾಮರ್ಥ್ಯದೊಂದಿಗೆ ವಿಶ್ವದಲ್ಲಿ ಹೊಸ ಹಾರಾಟ ಆರಂಭಿಸಿದೆ. ಇಂದು ಭಾರತದ ವಾಯುಯಾನದ ಘನತೆ ಜಗತ್ತಿಗೆ ವ್ಯಾಪಿಸಿದೆ. ಮುಂಬರುವ ದಿನಗಳಲ್ಲಿ ಸಾವಿರಾರು ವಿಮಾನಗಳ ಅವಶ್ಯಕತೆ ಭಾರತಕ್ಕೆ ಇರಲಿದೆ.  ಈ ವಿಮಾನಗಳಲ್ಲಿ ಕೆಲಸ ಮಾಡಲು ಸಾವಿರಾರು ಯುವಕರ ಅವಶ್ಯಕತೆ ಬೀಳಲಿದೆ. ಇಂದು ನಾವು ವಿಮಾನಗಳನ್ನು ವಿದೇಶದಿಂದ ಖರೀದಿಸಬಹುದು ಆದರೆ ಭಾರತೀಯ ನಾಗರಿಕರು ಮೇಡ್‌ ಇನ್‌ ಇಂಡಿಯಾ ಪ್ಯಾಸೇಂಜರ್‌ ವಿಮಾನದಲ್ಲಿ ಪ್ರಯಾಣಿಸುವ ದಿನ ದೂರವಿಲ್ಲ ಎಂದರು.

ಕೃಪೆ: news13.in

Share This
300x250 AD
300x250 AD
300x250 AD
Back to top