• Slide
    Slide
    Slide
    previous arrow
    next arrow
  • ಮಾರಿಕಾಂಬಾ ಕ್ರೀಡಾಂಗಣದಲ್ಲಿ ‘Health Cricket League-2023’ ಯಶಸ್ವಿ

    300x250 AD

    ಶಿರಸಿ: ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕೆಮಿಸ್ಟ್& ಡ್ರಗ್ಗಿಸ್ಟ್ ಅಸೋಸಿಯೇಷನ್ ಶಿರಸಿ ಘಟಕ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಶಿರಸಿ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆ ಉತ್ತರ ಕನ್ನಡ, ಕರ್ನಾಟಕ ರಾಜ್ಯ ಸರ್ಕಾರಿ ಪ್ರಯೋಗಶಾಲಾ ತಂತ್ರಜ್ಞರ ಸಂಘ ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್(ರಿ.) ಶಿರಸಿ ಹಾಗೂ ಇಕೋ ಕೇರ್(ರಿ.) ಶಿರಸಿ ಇವರ ಸಹಭಾಗಿತ್ವದಲ್ಲಿ ನಡೆದ “Health Cricket League 2023” Season-1, ರ ಉದ್ಘಾಟನೆಯನ್ನು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಶಾಖೆಯ ಅಧ್ಯಕ್ಷ ಮಹೇಶ್ ಡಿ. ನಾಯಕ್ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಗ್ರೀನ್ ಕೇರ್ ಸಂಸ್ಥೆ ಶಿರಸಿ ಕಾರ್ಯದರ್ಶಿ ಜಿತೇಂದ್ರ ಕುಮಾರ್ ತೋನ್ಸೆ, ಕಪಿಲಾ ಫಾರ್ಮಾದ ರಾಜೇಂದ್ರ ಹೆಗಡೆ,ಪಟವರ್ಧನ್ ಫಾರ್ಮಾ ಶ್ಯಾಮಸುಂದರ ಹೆಗಡೆ, ಇಕೋ ಕೇರ್ ಶಿರಸಿಯ ಸುನಿಲ್ ಭೋವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಬಹುಮಾನ ವಿತರಣೆ ಸಮಾರಂಭದಲ್ಲಿ ಕಪಿಲಾ ಏಜೆನ್ಸಿ ಮಾಲೀಕ ಚಂದ್ರಶೇಖರ ಹೆಗಡೆ, ಶ್ರೀಧರ್ ಹೆಗಡೆ, ಮಧುಕರ್ ಹಲ್ಕಾರ್, ಸರೋಜ ಫಾರ್ಮ ಬಾಬುಲಾಲ್, ಶುಭದಾ ಫಾರ್ಮಾ ಗಣೇಶ್ ಹೆಗಡೆ, ಪ್ರವೀಣ್ ಪುಳಕರ್ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

    300x250 AD

    ಕರ್ನಾಟಕ ರಾಜ್ಯ ಔಷದ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ಶಿರಸಿ ಘಟಕ )ತಂಡ HCL2023 ಸೀಸನ 1ರ ಕಪ್ ತಮ್ಮದಾಗಿಸಿ ಕೊಂಡರು. Runnrup ಆಗಿ ರಾಜ್ಯ ಲ್ಯಾಬ್ ಟೆಕ್ನಿಷಿಯನ್ (ಜಿಲ್ಲಾ ಘಟಕ )ತಂಡ ಹೊರಹೊಮ್ಮಿತು.ಸಂಘಟನಾ ಸಮಿತಿಯ ಪರವಾಗಿ ರಾಜ್ಯ ಔಷದ & ಮಾರಾಟ ಪ್ರತಿನಿಧಿ ಸಂಘ ಶಿರಸಿ ಘಟಕದ ಕಾರ್ಯದರ್ಶಿ ರಮೇಶ್ ನಾಯ್ಕ್ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top