• Slide
    Slide
    Slide
    previous arrow
    next arrow
  • ಚುನಾವಣೆ ವೇಳೆ ಅಪಪ್ರಚಾರ ಸಾಮಾನ್ಯ, ತಲೆಕೆಡಿಸಿಕೊಳ್ಳಬೇಡಿ: ಸಚಿವ ಹೆಬ್ಬಾರ್

    300x250 AD

    ಯಲ್ಲಾಪುರ: ಚುನಾವಣೆ ವೇಳೆ ಪ್ರಚಾರದ ಜೊತೆ ಅಪಪ್ರಚಾರ ಸಾಮಾನ್ಯ. ಇದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
    ಎಪಿಎಂಸಿ ರೈತ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಲದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಸೇನಾಧಿಪತಿ ಗಟ್ಟಿ ಇದ್ದರೆ ಮಾತ್ರ ಸೈನ್ಯ ಗಟ್ಟಿಯಿರಲು ಸಾಧ್ಯ. ಆದ್ದರಿಂದ ಪಕ್ಷದ ನಾಯಕರಾಗಿರುವ ಎಲ್ಲ ಸೈನಿಕರು ಪಕ್ಷವನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮತ್ತಷ್ಟು ಸದೃಢಗೊಳಿಸಬೇಕು. ಈ ಬಾರಿ ನಾನು ಎದುರಿಸುತ್ತಿರುವ 5ನೆಯ ಚುನಾವಣೆ, ಮತದಾರರು ತನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು. ನಾನು ಸಮಾಜದ ಎಲ್ಲ ಮತದಾರರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಕಾರ್ಯದಲ್ಲಿಯೂ ಸಾಕಷ್ಟು ಶ್ರಮ ವಹಿಸಿದ್ದೆನೆ. ಕಳೆದ 2 ವರ್ಷಗಳಿಂದ ಕೋವಿಡ್‌ನಿಂದಾಗಿ ಅಭಿವೃದ್ಧಿಯ ವೇಗಕ್ಕೆ ಹಿನ್ನಡೆಯುಂಟಾಗಿತ್ತು. ಇದೀಗ ಅಂತಹ ಸಮಸ್ಯೆಗಳನ್ನು ದಾಟಿ ದಾಪುಗಾಲಿಟ್ಟು ಅಭಿವೃದ್ಧಿ ಕಾರ್ಯದಲ್ಲಿ ಮುನ್ನಡೆ ಸಾಧಿಸಲಾಗುತ್ತಿದೆ ಎಂದರು.
    ಕ್ಷೇತ್ರದ ಚುನಾವಣಾ ಉಸ್ತುವಾರಿ ರವಿ ಹೆಗಡೆ ಹೂವಿನಮನೆ ಮಾತನಾಡಿ, ಎದುರಾಗಿರುವ ಚುನಾವಣೆಯ ಪರೀಕ್ಷೆಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಮೈಮರೆಯದೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
    ಜಿಲ್ಲಾ ಸಹಪ್ರಭಾರಿ ಪ್ರಸನ್ನ ಕೆರೆಕೈ ಮಾತನಾಡಿ, ಬರಲಿರುವ ಎಪ್ರಿಲ್ ಅಂತ್ಯದಲ್ಲಿ ಚುನಾವಣೆ ನಡೆಯಬಹುದಾಗಿದ್ದು, ಮತದಾರರ ಮನಃಸ್ಥಿತಿಯನ್ನು ಅವಲೋಕಿಸುವುದೇ ಸಮಾವೇಶದ ಉದ್ಧೇಶವಾಗಿದೆ. ಈ ಬಾರಿಯೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಕಾರ್ಯಕರ್ತರು ಶಪಥ ಮಾಡಬೇಕಿದೆ ಎಂದರು.
    ಶಿವಮೊಗ್ಗದ ಸಹಪ್ರಭಾರಿ ಎನ್.ಎಸ್.ಹೆಗಡೆ, ಮಂಡಳಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಕಾರ್ಯದರ್ಶಿಗಳಾದ ರವಿ ಭಟ್ಟ ಬರಗದ್ಧೆ, ಪ್ರಸಾದ ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top