ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ದೆಹಲಿ ಕರ್ನಾಟ ಸಂಘ ಆಯೋಜಿಸಿರುವ ಎರಡು ದಿನಗಳ “ಬಾರಿಸು ಕನ್ನಡ ಡಿಂಡಿಮವ” ಸಾಂಸ್ಕೃತಿಕ ಉತ್ಸವವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮೋದಿ, “ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನರ ಕೊಡುಗೆ ಸಾಕಷ್ಟಿದೆ. ಪುರಾಣ ಕಾಲದಿಂದ ಕರ್ನಾಟಕದಲ್ಲಿ ಹನುಮನ ಮಾತಿದೆ. ಹನುಮಂತನ ಹೊರತಾಗಿ ರಾಮನ ಕಥೆಯಿಲ್ಲ. ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆ ಅದ್ಭುತವಾದುದು. ಅದರಲ್ಲಿ ಭಾರತದ ಸಭ್ಯತೆಯ ಉಲ್ಲೇಖವಿದೆ. ಇಡೀ ಭಾರತ ಹಾಗೂ ಕರ್ನಾಟಕದ ವಿವರಣೆಯನ್ನು ಒಳಗೊಂಡಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಸಂದೇಶವನ್ನು ಸಾರುತ್ತದೆ” ಎಂದಿದ್ದಾರೆ.