Slide
Slide
Slide
previous arrow
next arrow

ಕಾಗದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಅಂತ್ಯ; ಸುನೀಲ ಹೆಗಡೆ ಹರ್ಷ

300x250 AD

ದಾಂಡೇಲಿ: ಕಳೆದ 9 ದಿನಗಳಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿದ್ದ ಗುತ್ತಿಗೆ ಕಾರ್ಮಿಕರು ಕೊನೆಗೂ ಹೋರಾಟವನ್ನು ಅಂತ್ಯಗೊಳಿಸಿರುವುದಕ್ಕೆ ಮಾಜಿ ಶಾಸಕ ಸುನೀಲ ಹೆಗಡೆ ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಮತ್ತು ಪ್ರತಿಭಟನೆಯಿಂದಾಗಿ ಕಾರ್ಖಾನೆಯ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಆಗಬಹುದಾದ ತೊಂದರೆಗಳ ಬಗ್ಗೆ ಕಾರ್ಮಿಕ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಉಪ ಕಾರ್ಮಿಕ ಆಯುಕ್ತರ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿದ್ದೆ ಎಂದು ಅವರು ಹೇಳಿದರು.
ಕಾಗದ ಕಾರ್ಖಾನೆಯ ಉತ್ಪಾದನಾ ಚುಟುವಟಿಕೆ ಸ್ಥಗಿತವಾಗುವಂತಹ ಹಂತಕ್ಕೆ ಹೋಗುವುದನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಗಮನಿಸಿ, ಅಗತ್ಯ ಕ್ರಮವನ್ನು ಕೋಗೊಳ್ಳಬೇಕಿತ್ತು. ಆದಾಗ್ಯೂ ಕೊನೆಗೂ ಕಾಗದ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಜಂಟಿ ಸಂಧಾನ ಸಮಿತಿ ಸಭೆ ನಡೆಸಿ, ಪ್ರತಿಭಟನೆ ಅಂತ್ಯಗೊಳಿಸುವ ಮಟ್ಟಕ್ಕೆ ಸಭೆ ಫಲಪ್ರದಾಯಕವಾಗಿ ನಡೆದಿರುವುದು ಉತ್ತಮವಾದ ಬೆಳವಣಿಗೆ. ಈ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಸಹ ಪ್ರತಿಭಟನೆಯನ್ನು ಕೈಬಿಟ್ಟು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದು ನಮಗೆ ಅತೀವವಾದ ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ಕಾರ್ಖಾನೆ ಮತ್ತು ಕಾರ್ಮಿಕರ ನಡುವೆ ಸೌಹಾರ್ದತೆ ವಾತವರಣ ಸೃಷ್ಟಿಯಾಗಿ, ಕಾರ್ಖಾನೆಯ ಬೆಳೆಯುವುದರ ಜೊತೆಗೆ ಕಾರ್ಮಿಕರಿಗೂ ಉನ್ನತಿಯಾಗಲಿ ಎಂದು ಆಶಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಕಾAತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಉಪಾಧ್ಯಕ್ಷ ಸಂತೋಷ್ ಸೋಮನಾಚೆ, ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಪಾಟೀಲ್, ಯುವ ಮೋರ್ಚಾ ಅಧ್ಯಕ್ಷ ಈರಯ್ಯಾ ಸಾಲಿಮಠ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top