ಯಲ್ಲಾಪುರ: ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಬೆಳಿಗ್ಗೆ ಶ್ರೀ ಗ್ರಾಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಗದ್ದುಗೆಗೆ ಕುಟುಂಬ ಸಮೇತರಾಗಿ ತೆರಳಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.
ನಂತರ ಗದ್ದುಗೆಯ ಆವರಣದಲ್ಲಿ ವಿಜಯ ಮಿರಾಶಿ ಅಭಿಮಾನಿಗಳ ಬಳಗದ ವತಿಯಿಂದ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿರುವ ಶುದ್ಧ ಕುಡಿಯುವ ನೀರಿನ ಸೇವಾ ಕಾರ್ಯದಲ್ಲಿ ಸಚಿವರು ಭಾಗಿಯಾಗಿ ಭಕ್ತಾದಿಗಳಿಗೆ ನೀರನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್, ಪುತ್ರ ಯುವ ನಾಯಕರಾದ ವಿವೇಕ್ ಹೆಬ್ಬಾರ್, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಪ್ರಮುಖರಾದ ವಿಜಯ ಮಿರಾಶಿ, ಬಾಲಕೃಷ್ಣ ನಾಯಕ ಸೇರಿದಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ ಹಾಗೂ ಸದಸ್ಯರು ಇದ್ದರು.