• Slide
  Slide
  Slide
  previous arrow
  next arrow
 • ಫೆ.26ಕ್ಕೆ ಶ್ರೀಬಾಲಮಾಸ್ತಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ

  300x250 AD

  ಅಂಕೋಲಾ: ಫೆ.26ರಂದು ಕಳಸವಾಡಾದಲ್ಲಿರುವ ಶ್ರೀಬಾಲಮಾಸ್ತಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
  ಅಂದು ಬೆಳಿಗ್ಗೆ 8 ಗಂಟೆಯಿಂದ ಪಂಚಾಮೃತ ಅಭಿಷೇಕ, ಉಡಿ ತುಂಬುವುದು, ತುಲಾಭಾರ ಪೂಜಾ ಕಾರ್ಯಕ್ರಮಗಳು ನಡೆಯುವುದು. ಮಧ್ಯಾಹ್ನ 1ರಿಂದ 3.30ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಗಂಟೆಗೆ ಭಜನಾ ಸಂಧ್ಯಾ ಕಾರ್ಯಕ್ರಮ. ನಂತರ ರಾತ್ರಿ 8 ಗಂಟೆಗೆ ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
  ತದನಂತರದಲ್ಲಿ ಕಾರವಾರದ ಮೆಲೋಡಿಯಸ್ ವೈಸ್ ಇವರಿಂದ ಕೆರೋಕೆ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನ ಕಳಸವಾಡದ ಉದಯ ಕಳಸ ಆಯೋಜಿಸಿದ್ದಾರೆ. ಭಕ್ತಾದಿಗಳು ಈ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀಬಾಲಮಾಸ್ತಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top