ಕಾರವಾರ: ನಗರದ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಮೀಣ ಹಾಗೂ ನಗರ ಮಂಡಲದ ವತಿಯಿಂದ ನಡೆಯುವ ಪ್ರಗತಿಪಥ ರಥಯಾತ್ರೆ, ಮೋರ್ಚಾ ಸಮಾವೇಶ ಹಾಗೂ ಫಲಾನುಭವಿ ಸಮಾವೇಶದ ಕುರಿತು ಪೂರ್ವಭಾವಿ ಸಭೆ ಜರುಗಿತು.
ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪ್ರಪ್ರಥಮವಾಗಿ ಬಿಜೆಪಿ ನಗರಾಧ್ಯಕ್ಷ ನಾಗೇಶ ಕುರ್ಡೇಕರ ವೇದಿಕೆಯ ಮೇಲಿದ್ದ ಗಣ್ಯರನ್ನು ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಗತಿಪಥ ರಥ ಯಾತ್ರೆ, ಮೋರ್ಚಾ ಸಮಾವೇಶ, ಫಲಾನುಭವಿ ಸಮಾವೇಶದ ರೂಪುರೇಷೆ ಕುರಿತು ವಿವರಿಸಿದರು.
ಶಿವಮೊಗ್ಗ ಜಿಲ್ಲಾ ಸಹ ಪ್ರಭಾರಿ ಆರ್.ಡಿ.ಹೆಗಡೆ ಮಾತನಾಡಿ, ಪಕ್ಷ ಈ ಹಿಂದೆ ನೀಡಿದ ಜವಾಬ್ದಾರಿಗಳನ್ನು, ಕಾರ್ಯಕ್ರಮಗಳನ್ನು ಬಹು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಹಾಗೆಯೇ ಪಕ್ಷ ನೀಡಿದ ಮುಂದಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡಲು ವಿನಂತಿಸಿದರು.
ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ ಮಾತನಾಡಿ, ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಜವಾಬ್ದಾರಿ ಹೊಂದಿದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶಕ್ತಿ ಮೀರಿ ದುಡಿದು, ಕರ್ನಾಟದಲ್ಲಿ ಹಾಗು ಕ್ಷೇತ್ರದಲ್ಲಿ, ಬಿಜೆಪಿ ಯ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕಾಗಿ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಶೋಭಾ ನಾಯ್ಕ, ಮಹಿಳಾ ಮೋರ್ಚಾದ ಸಮಾವೇಶದ ಕುರಿತು ವಿವರಿಸಿದರು. ವೇದಿಕೆ ಮೇಲೆ ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ನಗರ ಪ್ರಭಾರಿ ಆರತಿ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ವಕ್ತಾರ ನಾಗರಾಜ ನಾಯಕ, ಮಾಜಿ ಶಾಸಕ ಗಂಗಾಧರ ಭಟ್, ಪ್ರಧಾನ ಕಾರ್ಯದರ್ಶಿಗಳು, ಯುವ ಮೋರ್ಚಾ ಅಧ್ಯಕ್ಷರು, ಮಹಿಳಾ ಮೋರ್ಚಾ ಅಧ್ಯಕ್ಷರು, ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಎಲ್ಲಾ ಮೋರ್ಚಾದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ವಂದನಾರ್ಪಣೆ ಸಲ್ಲಿಸಿದರು.