Slide
Slide
Slide
previous arrow
next arrow

ಹಿರಿಯ ಪತ್ರಕರ್ತ ಟಿ.ಬಿ. ಹರಿಕಾಂತ್‌ಗೆ ‘ಕದರವೇ’ ಸನ್ಮಾನ

300x250 AD

ಕಾರವಾರ: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತ ಟಿ.ಬಿ.ಹರಿಕಾಂತ್ ಅವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ನೇತೃತ್ವದಲ್ಲಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ.ಬಿ.ಹರಿಕಾಂತ್ ಅವರಿಗೆ ಶಾಲು ಹೊದಿಸಿ, ಬುದ್ಧನ ಮೂರ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಲಿಷಾ, ರಾಜ್ಯ ಮಟ್ಟದ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಕಾರವಾರದ ಪತ್ರಕರ್ತರಿಗೆ, ಅದರಲ್ಲೂ ಹಿರಿಯರಾಗಿರುವ ಟಿ.ಬಿ.ಹರಿಕಾಂತ್ ಅವರಿಗೆ ದೊರಕಿರುವುದು ಸಂತಸ ತಂದಿದೆ. ಇವರು ಹಲವಾರು ವರ್ಷಗಳಿಂದ ಜಿಲ್ಲೆಯ ಸಮಸ್ಯೆಗಳನ್ನು ಸಮಾಜದ ಮುಂದಿಟ್ಟು, ಅದಕ್ಕೆ ಪರಿಹಾರ ಕೊಡಿಸುವಲ್ಲಿ ಪ್ರಮುಖ ಪಾತ್ರಧಾರರು. ಇವರಿಗೆ ಈ ಪ್ರಶಸ್ತಿ ಅರ್ಹವಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೀರ್ತಿ, ಸನ್ಮಾನ ಇವರಿಗೆ ದೊರಕುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದಲಿತ ಪ್ರಮುಖರಾದ ಶಂಕರ್ ವಡ್ಡರ್, ಮಾರುತಿ ನಾಯ್ಕ, ಕೆಂಪಣ್ಣ ವಡ್ಡರ್, ಗಂಗಾ ನಾಯ್ಕ, ಲಕ್ಷ್ಮಿ ವಡ್ಡರ್, ಸುಭಾಷ್ ವಡ್ಡರ್, ಸುರೇಶ್ ವಡ್ಡರ್, ಬಸವರಾಜ್ ವಾಲ್ಮೀಕಿ, ಜಾಫರ್ ಕರ್ಜಗಿ ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top