Slide
Slide
Slide
previous arrow
next arrow

ಕಾಮಗಾರಿ ಪೂರ್ಣಗೊಳಿಸಿ ಫೆ.28ರೊಳಗೆ ಬಿಲ್ ಸಲ್ಲಿಸಿ: ತಾ.ಪಂ ಆಡಳಿತಾಧಿಕಾರಿ ಸೂಚನೆ

300x250 AD

ಕಾರವಾರ: ತಾಲೂಕಿನ 18 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 15ನೇ ಹಣಕಾಸು, ಕೋಟಿ ಅನುದಾನ, ನರೇಗಾ ಸೇರಿದಂತೆ ವಿವಿಧ ಯೋಜನೆಗಳ ಅನುದಾನದಲ್ಲಿ ಕೈಗೆತ್ತಿಕೊಂಡರಿರುವ ಅಂಗನವಾಡಿ, ಕಾಂಪೌಂಡ್, ಘನತ್ಯಾಜ್ಯ ವಿಲೇವಾರಿ ಘಟಕ, ಸಿಸಿ ರಸ್ತೆ ನಿರ್ಮಾಣ, ಬೀದಿ ದೀಪ ಅಳವಡಿಕೆ, ಉದ್ಯಾನವನ, ಸ್ಮಶಾನ ಅಭಿವೃದ್ಧಿಯಂತಹ ಎಲ್ಲ ಕಾಮಗಾರಿಗಳನ್ನು ಫೆಬ್ರವರಿ 28ರೊಳಗಾಗಿ ಪೂರ್ಣಗೊಳಿಸಿ ಸಂಬಂಧಪಟ್ಟ ಬಿಲ್‌ಗಳನ್ನು ತಾಲೂಕು ಪಂಚಾಯತ್‌ಗೆ ಸಲ್ಲಿಸಬೇಕು ಎಂದು ಸಭೆಯಲ್ಲಿದ್ದ ಪಿಆರ್‌ಇಡಿ ಎಇಇ, ಎಇ ಹಾಗೂ ಜೆಇ ಅವರಿಗೆ ತಾಲೂಕು ಪಂಚಾಯತ್‌ನ ಆಡಳಿತಾಧಿಕಾರಿ ಸೋಮಶೇಖರ ಮೇಸ್ತಾ ಸೂಚಿಸಿದರು.
ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗುರುವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಯೋಜನೆಗಳ ಅನುದಾನದಲ್ಲಿ ಕಳೆದ 3-4 ವರ್ಷದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದ ಸಾಮಗ್ರಿ ಬಳಸಿಕೊಂಡು ಮುಂಬರುವ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ನಿರ್ಮಿಸಬೇಕು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳು  ಅಪೂರ್ಣಗೊಂಡ ಕಾಮಗಾರಿಗಳ ಬಿಲ್ ನೀಡುವ ಬದಲಿಗೆ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ಕೊಡಬೇಕು. ಕಾಮಗಾರಿ ಬಿಲ್‌ಗಳ್ನ್ನು ನೀಡಿದ ತಕ್ಷಣ ಹಣ ಪಾವತಿಯಾಗುವಂತೆ ಕ್ರಮವಹಿಸಬೇಕು. ಅಲ್ಲದೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಪಡಿಸಲಾದ ಕಾಮಗಾರಿಗಳು ಮುಂಬರುವ ವರ್ಷದಲ್ಲಿ ಮರುಕಳಿಸದಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಸ್ಮಶಾನ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲಿಸಿದ ಆಡಳಿತಾಧಿಕಾರಿಗಳು, ತಾಲೂಕಿನ 18 ಗ್ರಾಪಂ ವ್ಯಾಪ್ತಿಯ 64 ಗ್ರಾಮಗಳ ಪೈಕಿ ಎಷ್ಟು ಕಡೆಗಳಲ್ಲಿ ಸ್ಮಶಾನಗಳಿವೆ. ಇನ್ನೂ ಎಷ್ಟು ಗ್ರಾಮಗಳಲ್ಲಿ ಬೇಡಿಕೆಯಿದೆ. ಅಭಿವೃದ್ಧಿಪಡಿಸಲಾದ ಸ್ಮಶಾನಗಳಲ್ಲಿ ಚಿತಾಗಾರ ಶೆಡ್, ಸಂಪರ್ಕ ರಸ್ತೆ, ನೀರು, ನೆರಳನಂತಹ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆಯಾ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಜೊತೆಗೆ ತಾಲೂಕಿನ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಟೆಗಾಳಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ನರೇಗಾದಿಂದ ಅಭಿವೃದ್ಧಿಪಡಿಸಲಾದ ಭೀಮ್‌ಕೋಲ್ ಕೆರೆ ಆವರಣದಲ್ಲಿ ಪ್ರಸಕ್ತ ವರ್ಷದಲ್ಲಿ ನರೇಗಾ ಹಾಗೂ ತಾ.ಪಂ ಅನುದಾನದಲ್ಲಿ ಅಭಿವೃದ್ಧಿಸುತ್ತಿರುವ ಉದ್ಯಾನವನ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದರು.
ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಲಪ್ಪನವರ ಆನಂದಕುಮಾರ ಮಾತನಾಡಿ, ಭೀಮ್‌ಕೋಲ್ ಕೆರೆ ಆವರಣದಲ್ಲಿ ಪ್ರಗತಿಯಲ್ಲಿರುವ ಉದ್ಯಾನವನ ಕಾಮಗಾರಿ ಸ್ತಯಳದಲ್ಲಿ ಸಂಪರ್ಕ ರಸ್ತೆ, ಫೆವರ್ಸ್ ಅಳವಡಿಕೆ, ವಿಶ್ರಾಂತಿ ಗೋಪುರ, ಆಸನಗಳ ನಿರ್ಮಾಣ, ಆಕರ್ಷಕ ಪ್ರಾಣಿ, ಪಕ್ಷಿ ಮೂರ್ತಿ, ಕಾವಲುಗಾರ ಕೊಠಡಿ, ಕಮಾನು, ಗೇಟ್ ನಿರ್ಮಾಣದಂತಹ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಹುಲ್ಲು ಹಾಸಿಗೆ ನಿರ್ಮಾಣ, ಸೋಲಾರ್ ಅಳವಡಿಕೆಯಂತಹ ಸಣ್ಣಪುಟ್ಟ ಕಾರ್ಯಗಳು ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದರು.
ನರೇಗಾ ಸಹಾಯಕ ನಿರ್ದೇಶಕ ರಾಮದಾಸ್ ನಾಯ್ಕ, ಪಿಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ರವಿಕುಮಾರ ಕಾಳಗಿ, ಸಹಾಯಕ ಇಂಜಿನಿಯರ್ ಪಿ.ಎನ್.ರಾಣೆ, ಕಿರಿಯ ಸಹಾಯಕ ಇಂಜಿನಿಯರ್ ಮಡಿವಾಳಪ್ಪ, ತಾಪಂ ವ್ಯವಸ್ಥಾಪಕರಾದ ಅನಿತಾ ಬಂಡಿಕಟ್ಟಿ, ಪ್ರಥಮ ದರ್ಜೆ ಸಹಾಯಕರಾದ ಭಾರತಿ ಕಾಂಬಳೆ, ರಾಮದಾಸ್ ಗುರವ, ತಾಲೂಕಾ ಐಇಸಿ ಸಂಯೋಜಕರಾದ ಫಕೀರಪ್ಪ ತುಮ್ಮಣ್ಣನವರ ಸೇರಿದಂತೆ ತಾ.ಪಂ ಸಿಬ್ಬಂದಿ ಇದ್ದರು.

300x250 AD
Share This
300x250 AD
300x250 AD
300x250 AD
Back to top