Slide
Slide
Slide
previous arrow
next arrow

ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ: ಸಾಹಿತಿ ತಮ್ಮಣ್ಣ ಬೀಗಾರ ಅಭಿಪ್ರಾಯ

300x250 AD

ಶಿರಸಿ: ಬೇಡದ ಬೇಕಿರುವ ಚಿಂತೆ, ಚಿಂತನೆಯನ್ನು ನಾವು ಮಾಡುತ್ತೇವೆ ಆದರೆ ಮಕ್ಕಳು ಹಾಗಲ್ಲ. ಅವರ ಮನ್ನು ನಿಷ್ಕಲ್ಮಷವಾಗಿರುತ್ತದೆ. ನಾವು ಏನನ್ನು ನೀಡುತ್ತೇವೆಯೋ ಅದನ್ನೇ ನೋಡಿ ಕಲಿಯುತ್ತಾರೆ. ನಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕೆಂದಿದ್ದರೆ ಮೊದಲು ನಾವು ಅವಕ ಕೈಗೆ ಬಣ್ಣರ ಚಿತ್ತಾರಗಳ ಚಿತ್ರವನ್ನೇ ನೀಡಬೇಕು ಅವು ಅವರ ಚಿತ್ತವನ್ನು ಉತ್ತಮವಾಗಿ ಬದಲಿಸುತ್ತವೆ ಎಂದು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.


ಅವರು ಶಿರಸಿ ನಗರದ ಗಾಯತ್ರಿ ಗೆಳೆಯರ ಬಳಗ ಗುರುವಾರ ಸಂಜೆ ಆಯೋಜಿಸಿದ್ದ ಸನ್ಮಾನ, ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಅಂದಕೂಡಲೇ ಕಣ್ಣು ಬಿಡದೇ ಇರುವ ಹಕ್ಕಿ ಮರಿಯಂತೆ. ಅವು ಗುಟುಕು ಪಡೆದು ಸ್ವತಂತ್ರವಾಗಿ ಹಾರಾಡುವವರೆಗೂ ಇರಲಿದೆ. ಮಕ್ಕಳಲ್ಲಿಯ ನಿಷ್ಕಲ್ಮಷ ಭಾವ ಎದ್ದು ಕಾಣುತ್ತದೆ. ಯಾವುದೇ ಆದರೂ ಅದನ್ನು ಆಸ್ವಾದಿಸಬೇಕೆ ಹೊರತು ಪಾಯಿಪಾಠದಿಂದ ಆಕರ್ಷಣೆ ಆಗದು. ಆಕರ್ಷಣೆಯೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡುತ್ತದೆ. ಮಕ್ಕಳ ಬಾಲ್ಯದ ಜೀವನ ಸುಳ್ಳಿರದ, ಎಲ್ಲರ ಪ್ರೀತಿಸುವಭಾವವನ್ನು ನಾವು ಕಳೆದು ಕೊಂಡಿದ್ದೇವೆ. ಮತ್ತೆ ಬಾಲ್ಯ ಸಿಗಲಿ ಎಂದು ಕೊಳ್ಳುವ ಕಾಲಕ್ಕೆ ಇದ್ದರೂ ಎಲ್ಲರೂ ಆ ಮುಗ್ದತೆಯನ್ನು ಉಳಿಸಿಕೊಂಡಿಲ್ಲ. ಆದರೆ ಪ್ರತಿಯೊಬ್ಬರಲ್ಲಿಯೂ ಬಾಲ್ಯದ ಮುಗ್ದತೆ ಇರುತ್ತದೆ ಆದರೆ ಅದನ್ನು ಕಳೆದುಕೊಳ್ಳುವವರೇ ಹೆಚ್ಚು ಎಂದು ವಿಷಾದಿಸಿದ ಅವರು, ನಾವು ಮೊದಲು ನಮ್ಮ ಮಕ್ಕಳಿಗೆ ಮಾದರಿಗಳಾಗಿ ಅವರ ಕಣ್ಣಲ್ಲಿ ಕಾಣುವ ಭವಿಷ್ಯವೇ ನಮಗೆ ಜೀವನದಂತಾಗಬೇಕು. ಆ ರೀತಿಯಲ್ಲಿ ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆದರೆ ಇಂದು ಪಲಾಯನವಾದವಾಗುವ ತಂದೆ, ತಾಯಂದಿರೇ ಹೆಚ್ಚಾಗಿದ್ದಾರೆ ಆದರೆ ಅದು ನಿಜವಾದ ಕರ್ತವ್ಯವಲ್ಲ.
ಮಕ್ಕಳ ವ್ಯಕ್ತಿತ್ವ ರೂಪಗೊಳ್ಳುವಿಕೆ ನಿರಂತರ ಕ್ರಿಯೆ. ಪರಿಪೂರ್ಣರು ಯಾರೂ ಇರುವುದಿಲ್ಲ. ಆದರೆ ಬಾಲ್ಯದಲ್ಲಿ ಪರಿಸರದ ಪ್ರಭಾವಕ್ಕೆ ಒಳಗಾಗುತ್ತೇವೆ. ಮಕ್ಕಳಿಗೆ ಯಾವ ರೀತಿಯ ಪರಿಸರ ಒದಗಿಸಬಹುದು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಮಕ್ಕಳಿಗೆ ಕೊಡುವ ಪ್ರೀತಿ, ಕಟ್ಟಿಕೊಡುವ ಪ್ರೀತಿಯೇ ಉತ್ತಮ ಸಂಸ್ಕಾರವಾಗಲಿದೆ. ಮಕ್ಕಳ ಬಗ್ಗೆ ಹೇಳುವಾಗ ಮೊಬೈಲ್‌ಗೆ ಮಕ್ಕಳು ದಾಸರಾಗುತ್ತಾರೆ. ಎನ್ನುತ್ತೇವೆ. ಆದರೆ ನಾವು ಅದನ್ನು ಬಳಸಬೇಡಿ ಎನ್ನದೇ ಅದರ ಮೇಲಿನ ಪ್ರಭಾವದ ಬಗ್ಗೆ ಗಮನ ಹರಿಸಬೇಕು. ಉತ್ತಮವಾದುದೇ ಅವರು ತೆಗೆದುಕೊಳ್ಳಬೇಕೆಂದು ನಾನು ಅವರಿಗೆ ಮನವರಿಕೆ ಮಾಡಬೇಕು. ಬಣ್ಣ, ಬಣ್ಣದ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದನೀಡುತ್ತದೆ. ಚಿತ್ರಗಳೇ ಮನಸ್ಸಿನಚಿತ್ತಾರ ಬಿಡಿಸಬಲ್ಲವು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರ ಗುರುತಿಸುವಿಕೆಯ ಕಾರ್ಯವಾಗಬೇಕಿದೆ. ಅಂಥಹ ಕಾರ್ಯವನ್ನು ಗಾಯತ್ರಿ ಗೆಳೆಯರ ಬಳಗ ನಿರಂತರವಾಗಿ ಮಾಡುತ್ತ ಬಂದಿದ್ದು ಆಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು.
ಸನ್ಮಾನ ಸ್ವೀಕರಿಸಿದ ಪಂಡಿತ್ ಆಸ್ಪತ್ರೆ ಸುಶ್ರೂಷಕಿ ರವಿನಾ ರೊಡ್ರಿಗ್ಸ್ ಮಾತನಾಡಿ, ನನ್ನ ಕಾರ್ಯ ಗುರುತಿಸಿದ ಎಲರಿಗೂ ಧನ್ಯವಾದ ತಿಳಿಸಿದರು.
ಡಿ.ಎಂ. ಭಟ್ ಕುಳವೆ ಸ್ವಾಗತಿಸಿದರು. ಸಾಹಿತಿ ತ್ರಿವೇಣಿ ಹೆಗಡೆ ಪರಿಚಯಿಸಿದರು. ಬಳಗದ ವಿ.ಜಿ. ಗಾಯತ್ರಿ ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top