Slide
Slide
Slide
previous arrow
next arrow

ರಾಜ್ಯಮಟ್ಟದ ಅಥ್ಲೆಟಿಕ್ಸ್: ಲಯನ್ಸ್ ವಿದ್ಯಾರ್ಥಿನಿ ತನುಶ್ರೀ ರಾಷ್ಟ್ರಮಟ್ಟಕ್ಕೆ

300x250 AD

ಶಿರಸಿ: ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಫೆ. 20 ರಿಂದ 22 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶಾಲಾ ಮಕ್ಕಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಕು. ತನುಶ್ರೀ ಟಿ  ಭಾಗವಹಿಸಿದ್ದು,  ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ರಜತ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. 

ವಿದ್ಯಾರ್ಥಿನಿಯ ಈ ಸಾಧನೆಗೆ ಕಾರಣರಾದ ಪಾಲಕರಿಗೆ, ತರಬೇತುದಾರರಿಗೆ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿಯವರು, ಲಯನ್ಸ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ, ಶಿಕ್ಷಕೇತರ ಭಾಂದವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಶಾಲೆಯ ವಿದ್ಯಾರ್ಥಿ ಹಾಗೂ ಪಾಲಕವೃಂದ  ಆಶೀರ್ವಾದಪೂರ್ವಕವಾಗಿ ಅಭಿನಂದಿಸಿ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top