ಅಂಕೋಲಾ: ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಯುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ಜಿಲ್ಲೆಯ ಅಥ್ಲೀಟ್ಸ್ 7 ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
4 ಬಂಗಾರದ ಪದಕಗಳು, 1 ಬೆಳ್ಳಿಯ ಪದಕ ಮತ್ತು 2 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಬಾಲಕಿಯ 20 ವರ್ಷದ ವಯೋಮಿತಿಯಲ್ಲಿ ಮುಂಡಗೋಡದ ಬ್ರಿಡ್ಸ್ ಅಪ್ ಸ್ಪೋರ್ಟ್ಸ್ನ ನಯನಾ ಜಿ.ಕೆ. 100 ಮೀ. ಮತ್ತು 200 ಮೀ. ಸ್ಫರ್ಧೆಯಲ್ಲಿ ಬಂಗಾರದ ಪದಕಗಳನ್ನು ಗಳಿಸಿದ್ದಾಳೆ.
ಯಶಸ್ ಡಿ.ಕುರಬರ್ ಹ್ಯಾಮರ್ ಥ್ರೋ ಮತ್ತು ಚಕ್ರ ಎಸೆತದ ಸ್ಪರ್ಧೆಯಲ್ಲಿ ಬಂಗಾರದ ಪದಕಗಳನ್ನು ಗಳಿಸಿರುತ್ತಾನೆ. ಶಿರಸಿಯ ರೇಷ್ಮಾ ಪಾವಡ ಉದ್ದ ಜಿಗಿತದಲ್ಲಿ ಬೆಳ್ಳಿಯ ಪದಕವನ್ನು ಗಳಿಸಿದ್ದಾಳೆ. ನವ್ಯಾ ಭಟ್ ಗಂಡು ಎಸೆತದಲ್ಲಿ ಕಂಚಿನ ಪದಕ ಮತ್ತು ಚಂದನ್ ಪೂಜಾರಿ ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನು ಗೆದ್ದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ರಿಜ್ವಾನ್ ಬೆಂಡಿಗೇರಿ ನಯನಾ ಜಿ.ಕೆ. ಇವಳ ತರಬೇತುದಾರರಾಗಿದ್ದಾರೆ. ಪ್ರವೀಣ ಕುರುಬರ್ ಇವರು ಯಶಸ್ ಕುರುಬರ್, ನವ್ಯಾ ಭಟ್ಟ ಮತ್ತು ರೇಷ್ಮಾ ಪಾವಡ್ ಇವರ ತರಬೇತುದಾರರಾಗಿದ್ದಾರೆ ಎಂದು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ನಾಯಕ ಹಾಗೂ ಜಿಲ್ಲಾಧ್ಯಕ್ಷ ಸದಾನಂದ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.