ಕುಮಟಾ: ಹೊಲನಗದ್ದೆಯ ಕಡಲತೀರದಲ್ಲಿ ನಿರ್ಮಿಸಲಾದ ಮಹಾಶಿವನ ಮರಳಿನ ಶಿಲ್ಪ ಎಲ್ಲರ ಗಮನ ಸೆಳೆಯಿತು. ಮೂರ್ತಿ ಕಲಾಕಾರರಾದ ವೆಂಕಟರಮಣ ಆಚಾರಿ ನೇತೃತ್ವದಲ್ಲಿ ಊರ ನಾಗರಿಕರೆಲ್ಲ ಸೇರಿ ಮಹಾ ಶಿವನ ಸುಂದರ ಮರಳು ಶಿಲ್ಪವನ್ನು ರಚಿಸಿದ್ದು, ಈ ಮರಳು ಶಿಲ್ಪಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾ ಶಿವರಾತ್ರಿಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಈ ಮರಳು ಶಿಲ್ಪವು 15 ಅಡಿ ಎತ್ತರ ವಿದ್ದು, 22 ಅಡಿ ಉದ್ದವಿದೆ. ಕಳೆದ 12 ವರ್ಷಗಳಿಂದ ಪ್ರತಿ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಮಹಾ ಶಿವನ ಮರಳು ಶಿಲ್ಪವನ್ನು ನಿರ್ಮಿಸಲಾಗುತ್ತಿದೆ.