ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತವಾಗಿ ಬೆಳಗ್ಗಿನಿಂದಲೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಶಿವರಾತ್ರಿ ನಿಮಿತ್ತವಾಗಿ ದೇವಸ್ಥಾನವನ್ನು ಹೂವಿನ ಮಾಲೆಗಳಿಂದ ಆಲಂಕರಿಸಲಾಗಿತ್ತು.
ಬೆಳಗ್ಗಿನಿಂದಲೆ ಭಕ್ತರು ತಂಡೋಪತಂಡವಾಗಿ ಆಗಮಿಸಿ, ದೇವಸ್ಥಾನದ ಹತ್ತಿರದಲ್ಲೆ ಹರಿಯುತ್ತಿರುವ ಕಾಳಿ ನದಿಯಿಂದ ನೀರನ್ನು ತಂದು ಶಿವಲಿಂಗಕ್ಕೆ ಜಲಾಭಿಷೇಕವನ್ನು ಮಾಡಿ ಶಿವನ ಅನುಗ್ರಹಕ್ಕೆ ಪಾತ್ರರಾದರು. ಈಶ್ವರ ದೇವಸ್ಥಾನದಲ್ಲಿ ಕಿಕ್ಕಿರಿದು ಸೇರಿದ ಭಕ್ತರು ಓಂ ನಮ: ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಾ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಪುಣ್ಯಭಾಗಿಗಳಾದರು.
ಕುಳಗಿ ಈಶ್ವರ ದೇವಸ್ಥಾನದಲ್ಲಿ ಸಂಭ್ರಮದ ಶಿವರಾತ್ರಿ
