• Slide
    Slide
    Slide
    previous arrow
    next arrow
  • ಗೃಹಿಣಿ ನಾಪತ್ತೆ: ದೂರು ದಾಖಲು, ಸುಳಿವು ಸಿಕ್ಕರೆ ಮಾಹಿತಿ ನೀಡಿ

    300x250 AD

    ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಹೊರಗಡೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಕಾಣೆಯಾದ ಘಟನೆ ನಡೆದಿದೆ.

    ಉಮಾ ರತೀಶ ನಾಯಕ (48) ಕಾಣೆಯಾಗಿರುವ ಗೃಹಿಣಿಯಾಗಿದ್ದು, ಈ ಕುರಿತು ಮಹಿಳೆಯ ಪತಿ ರತೀಶ ವೆಂಕಟರಮಣ ನಾಯಕ ದೂರು ನೀಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಆಗಾಗ ಮನೆ ಬಿಟ್ಟು ಹೋಗುತ್ತೇನೆಂದು ಹೊರ ಹೋದವಳು ಸಂಜೆ ಮತ್ತೆ ಮನೆಗೆ ವಾಪಸಾಗುತ್ತಿದ್ದಳು.

    300x250 AD

    ಆದರೆ ಫೆ.16 ರಂದು ಬೆಳಿಗ್ಗೆ ಮನೆಯಿಂದ ಹೊರಟವಳು ಇದುವರೆಗೂ ಬಾರದಿರುವುದರಿಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಹುಡುಕಾಟ ನಡೆಸಲಾಗಿದೆ.  ಕಾಣೆಯಾಗಿರುವ ಉಮಾ 5.4″ ಎತ್ತರದ ನಸುಗಪ್ಪು ಮೈಬಣ್ಣ ಹೊಂದಿದ್ದು ಮನೆಯಿಂದ ಹೊರಟಾಗ ಕೇಸರಿ ಬಣ್ಣದ ಸೀರೆ ಮತ್ತು ನೀಲಿ ಬಣ್ಣದ ರವಿಕೆ ತೊಟ್ಟಿದ್ದು ಬೆನ್ನಿನ ಮೇಲೆ ಗಾಯದ ಕಲೆಯೊಂದಿದೆ. ಮಹಿಳೆಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-220333, ಮೊ.ನಂ.9480805250, 9480705268 ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹುಡುಕಾಟದ ಕಾರ್ಯ ಮುಂದುವರೆದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top