• Slide
    Slide
    Slide
    previous arrow
    next arrow
  • ಮನೆಗೆ ಬೆಂಕಿ ತಗುಲಿ ನೊಂದಿದ್ದ ಮಹಿಳೆಗೆ ನೆರವಾದ ವಿವೇಕ ಹೆಬ್ಬಾರ್

    300x250 AD

    ಮುಂಡಗೋಡ: ಆಕಸ್ಮಿಕ ಬೆಂಕಿ ತಗುಲಿ ಹಾನಿಗೊಳಗಾಗಿದ್ದ ಪಟ್ಟಣದ ಹೊಸ ಓಣಿಯ ವಾಣಿ ಬಾಳಂಬಿಡ ಎನ್ನುವವರ ಮನೆಗೆ ಯುವ ಮುಖಂಡ ವಿವೇಕ ಹೆಬ್ಬಾರ್ ಭೇಟಿ ನೀಡಿ, ಸಹಾಯಧನ ನೀಡಿದರು.
    ಹೊಸ ಓಣಿಯ ಪಡಿತರ ಅಕ್ಕಿ ನೀಡುವ ಕೇಂದ್ರದ ಪಕ್ಕದಲ್ಲಿನ ಹಂಚಿನ ಮನೆಯ ಚಾಳು ರಾಜು ಹಿರೇಮಠ ಎಂಬವವರಿಗೆ ಸೇರಿದ ಮನೆಯಲ್ಲಿ ಹೊಟೇಲ್ ಕೆಲಸ ಮಾಡುವ ವಾಣಿ ಬಾಡಿಗೆ ಇದ್ದರು. ಆದರೆ ಇತ್ತೀಚಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯಲ್ಲಿನ ಜೀವನೋಪಾಯದ ಸಾಮಗ್ರಿಗಳೆಲ್ಲ ಸಂಪೂರ್ಣ ಸುಟ್ಟು ಕರಕಲಾಗಿದ್ದವು.
    ವಿಷಯ ತಿಳಿದು ಮನೆಗೆ ಭೇಟಿ ನೀಡಿದ ವಿವೇಕ ಹೆಬ್ಬಾರ್, ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು. ಆರ್ಥಿಕವಾಗಿ ನೆರವು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುಡ್ಡಪ್ಪ ಕಾತೂರ, ಬಸವರಾಜ ಕಳಸಾಪುರ, ನಾಗರಾಜ ನಾಯ್ಕ, ಮನೋಜ ನಾಯ್ಕ, ಶ್ರೀಧರ ಡೋರಿ, ಪ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಹರ್ಮಲಕರ ಹಾಗೂ ಸಂಜು ಪಿಶೆ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top