• Slide
    Slide
    Slide
    previous arrow
    next arrow
  • ಕದಂಬೋತ್ಸವ-2023: ಫೆ.25ಕ್ಕೆ ಶೋಭಾಯಾತ್ರೆ

    300x250 AD

    ಶಿರಸಿ: ಕದಂಬೋತ್ಸವ 2023ರ ಶೋಭಾಯಾತ್ರೆಯ ಮೆರವಣಿಗೆಯು ಫೆ: 25 ರಂದು ಬನವಾಸಿಯಲ್ಲಿ ನಡೆಯಲಿದ್ದು,ಫೆ.16 ರಂದು ಬನವಾಸಿಯ ಜಯಂತಿ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕದಂಬೋತ್ಸವ ಮೆರವಣಿಗೆಯಲ್ಲಿ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಾದ್ಯತಂಡಗಳು, ರೂಪಕಗಳು ಭಾಗವಹಿಸಲಿವೆ.

    ಪ್ರತಿ ತಾಲೂಕಿನ ಕಲಾತಂಡಗಳು ಪಾಲ್ಗೊಳ್ಳುತ್ತಿದ್ದು ಸ್ಥಳೀಯ ಕಲಾತಂಡಗಳಿಗೂ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸುವ ಆಸಕ್ತ ಸ್ಥಳೀಯ ಕಲಾ ತಂಡಗಳು ಸಚಿತ್ರ ವಿವರದೊಂದಿಗೆ ಅರ್ಜಿಯನ್ನು ಜಯಂತಿ ಪ್ರೌಢಶಾಲೆ ದೈಹಿಕ ಶಿಕ್ಷಕ ಪ್ರಸನ್ನ ಗುನಗಾ ಮೋ: 9481111979 ಅಥವಾ ದೈಹಿಕ ಶಿಕ್ಷಣ ಪರಿವೀಕ್ಷಕ, ಬಿ.ವಿ. ಗಣೇಶ ಮೋ: 9448893933 ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿರಸಿ ಮೋ: 9480695391 ಇವರಲ್ಲಿ ಫೆ. 22ರ ಒಳಗಾಗಿ ಹೆಸರನ್ನು ನೋಂದಾಯಿಸಲು ಮೆರವಣಿಗೆಯ ಸಮಿತಿ ಅಧ್ಯಕ್ಷ, ಉಪನಿರ್ದೇಶಕರು, ಆಡಳಿತ ಸಮಿತಿಯವರು ಶಿರಸಿರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top