Slide
Slide
Slide
previous arrow
next arrow

ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಅನವಶ್ಯಕ ಆರೋಪ: ಬಿಜೆಪಿ ನಾಯಕರ ವಿರೋಧ

300x250 AD

ಕಾರವಾರ: ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಅನವಶ್ಯಕ ಆರೋಪಗಳನ್ನ ಮಾಡಲಾಗುತ್ತಿದೆ. ಇಂತಹ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಶ್ ಗುನಗಿ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ರೂಪಾಲಿ ನಾಯ್ಕ ಅವರು ಶಾಸಕರಾದ ನಂತರ ಹತ್ತು ಹಲವು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ. ಕ್ಷೇತ್ರದಲ್ಲಿ ಹಲವು ಕಾಮಗಾರಿಗಳನ್ನು ತರಲಾಗಿದೆ. ತಪ್ಪಾಗಿದ್ದರೆ ತಪ್ಪು ಎಂದು ಹೇಳಬೇಕು. ತಪ್ಪು ಮಾಡಿದ್ದರೆ ತಿದ್ದಿ ಕೊಳ್ಳಲಾಗುವುದು. ಆದರೆ ಯಾವುದೇ ತಪ್ಪು ಮಾಡದಿದ್ದರೂ ಸುಳ್ಳು ಆರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.
ಕಾರವಾರದಲ್ಲಿ ಪೇಜ್ ಪ್ರಮುಖ್ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಕಾರ್ಯಕರ್ತರು ಕ್ಷೇತ್ರದ ಮೂಲೆ ಮೂಲೆಗಳಿಂದ ತಮ್ಮ ಹಣವನ್ನೇ ಖರ್ಚು ಮಾಡಿಕೊಂಡು ಬಂದಿದ್ದಾರೆ. ಪೇಜ್ ಪ್ರಮುಖರನ್ನು ಪೇಡ್ ಪ್ರಮುಖರೆಂದು ಟೀಕಿಸಲಾಗಿದೆ. ಈ ಹೇಳಿಕೆ ಖಂಡನೀಯವಾಗಿದ್ದು, ಮಹಿಳಾ ಶಾಸಕಿಯಾದ ನಂತರ ರೂಪಾಲಿ ನಾಯ್ಕ ಅವರು ಉತ್ತಮ ಕೆಲಸ ಮಾಡಿದ್ದು, ಸದನದಲ್ಲೂ ಸರ್ಕಾರದ ಪರ ಧ್ವನಿಯಾಗಿದ್ದಾರೆ. ಇವರ ಉತ್ತಮ ಕಾರ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಕಿತ್ತೂರು ರಾಣಿ ಚೆನ್ನಮ್ಮ ಎಂದು ಹೇಳಿದ್ದು ಅದಕ್ಕೂ ಟೀಕೆ ಮಾಡಲಾಗಿದೆ. ಇದನ್ನ ಪಕ್ಷ ಖಂಡಿಸುತ್ತಿದೆ ಎಂದಿದ್ದಾರೆ.
ಕಾರವಾರದಲ್ಲಿ ಹಲವು ಹೊಸ ಪಾರ್ಕ್ ಗಳ ನಿರ್ಮಾಣ, ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ನಗರ ವ್ಯಾಪ್ತಿಯನ್ನ ಸುಂದರ ನಗರವನ್ನಾಗಿ ಮಾಡಲಾಗಿದೆ. ಇದಕ್ಕೆ ಪೌರಾಯುಕ್ತ ಆರ್ ಪಿ ನಾಯ್ಕ ಅವರೇ ಕಾರಣ ಎಂದು ಆರೋಪಿಸಲಾಗಿದೆ. ಆದರೆ ಕಾರವಾರ ನಗರ ಸುಂದರವಾಗಲು ಶಾಸಕಿ ರೂಪಾಲಿ ನಾಯ್ಕ ಕಾರಣ. ಅಧಿಕಾರಿಗಳಿಗೆ ಶಾಸಕರು ಸ್ಪಂದಿಸದಿದ್ದರೇ ಕೆಲಸ ಮಾಡಲು ಆಗುತ್ತಿತ್ತೆ. ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಂಡು ಬಂದು ಕಾರವಾರ ನಗರದಲ್ಲಿ ಅಭಿವೃದ್ದಿ ಮಾಡಲು ಸಹಕರಿಸಿದ್ದು ಶಾಸಕಿ ರೂಪಾಲಿ ನಾಯ್ಕ ಅವರು ಎಂದು ಸುಭಾಶ್ ಗುನಗಿ ಹೇಳಿದ್ದಾರೆ.
ಅಂಕೋಲಾ ಬಿಜೆಪಿ ಮಂಡಲಾಧ್ಯಕ್ಷ ಸಂಜಯ್ ನಾಯ್ಕ ಮಾತನಾಡಿ ಶಾಸಕರಾಗಿ ರೂಪಾಲಿ ನಾಯ್ಕ ಆಯ್ಕೆಯಾದ ನಂತರ ಮೊದಲು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿತ್ತು. ಇದಾದ ನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದ್ದು ಮೊದಲು ಕೊರೋನಾ ಸಮಸ್ಯೆ, ನೆರೆ ಇನ್ನಿತರ ಸಮಸ್ಯೆಗಳೇ ಎದುರಾಗಿದ್ದವು. ಆದರೆ ಶಾಸಕರು ಇದನ್ನೇಲ್ಲಾ ಸಮರ್ಥವಾಗಿ ಎದುರಿಸಿ ಕ್ಷೇತ್ರಕ್ಕೆ ಹತ್ತು ಹಲವು ಕಾಮಗಾರಿಗಳನ್ನ ತೆಗೆದುಕೊಂಡು ಬಂದು ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ಅಭಿವೃದ್ದಿ ಪರ್ವವನ್ನೇ ಹರಿಸಿದ್ದಾರೆ. ಅಂಕೋಲಾ, ಕಾರವಾರ ನಗರ ಸುಂದರವಾಗಿ ಮಾರ್ಪಟ್ಟಿದೆ. ಇದಕ್ಕೆ ಶಾಸಕರ ಶ್ರಮವೇ ಕಾರಣ ಎಂದಿದ್ದಾರೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ನಾಯಕ, ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಉದಯ್ ಬಶೆಟ್ಟಿ, ಕಾರವಾರ ನಗರ ಮಂಡಳ ಅಧ್ಯಕ್ಷ ನಾಗೇಶ್ ಕುರ್ಡೇಕರ್, ನಗರಸಭಾ ಸದಸ್ಯರಾದ ಮಾಳಾ ಹುಲಸ್ವಾರ್, ರೇಷ್ಮಾ ಮಾಳ್ಸೇಕರ್, ಮಾಜಿ ನಗರಸಭಾ ಸದಸ್ಯ ಪ್ರದೀಪ್ ಗುನಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top