Slide
Slide
Slide
previous arrow
next arrow

ಟಿ.ಬಿ.ಹರಿಕಾಂತ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ: ಸನ್ಮಾನ

300x250 AD

ಕಾರವಾರ: ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ್ ಅವರಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.
ಟಿ.ಬಿ.ಹರಿಕಾಂತ್ ಅವರು 26 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನವಾಹಿನಿ, ಕರಾವಳಿ ಮುಂಜಾವು, ಉಷಾಕಿರಣ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ನೂರಾರು ವಿಶೇಷ ವರದಿಗಳ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕಾರ್ಯ ಮಾಡಿರುವ ಹರಿಕಾಂತ್ ಅವರ ಸೇವೆಯನ್ನ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಸಭೆಯಲ್ಲಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಅವರನ್ನ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ, ಶೇಷಗಿರಿ ಮುಂಡಳ್ಳಿ, ಸುಭಾಷ್ ಧೂಪದಹೊಂಡ, ಸಂದೀಪ್ ಸಾಗರ್ ಮುಂತಾದವರು ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಮಾತನಾಡಿ, ಟಿ.ಬಿ ಹರಿಕಾಂತ್ ಹಾಗೂ ನಾನು ಸಮಕಾಲೀನ ಪತ್ರಕರ್ತರು. ಕರಾವಳಿ ಭಾಗಕ್ಕೆ, ಅದರಲ್ಲೂ ಕಾರವಾರಕ್ಕೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಬಂದಿರಲಿಲ್ಲ. ಈ ಬಾರಿ ಹರಿಕಾಂತ್ ಅವರಿಗೆ ಬಂದಿರುವುದು ಖುಷಿ ನೀಡಿದ್ದು, ಅವರ ಶ್ರಮಕ್ಕೆ ಸಿಕ್ಕ ಗೌರವ ಇದಾಗಿದೆ ಎಂದರು.
ಪತ್ರಕರ್ತ ಸುಭಾಶ್ ದೂಪದಹೊಂಡ ಮಾತನಾಡಿ, ಕಾರವಾರದಲ್ಲಿ ಹಲವು ವರ್ಷಗಳಿಂದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಟಿ.ಬಿ.ಹರಿಕಾಂತ್ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕರ್ತರು ಕಾರವಾರದಲ್ಲಿ ಒಗ್ಗಟ್ಟಾಗಿ ಇರಲು ಹರಿಕಾಂತ್ ಅವರ ಶ್ರಮವೇ ಕಾರಣ. ಜಿಲ್ಲೆಯ ಸಮಗ್ರ ಜ್ಞಾನವನ್ನ ಹೊಂದಿರುವ ಟಿ.ಬಿ ಹರಿಕಾಂತ್ ಉತ್ತಮ ಲೇಖನಗಳನ್ನ ಸುದ್ದಿಗಳನ್ನ ಮಾಡುತ್ತಾ ಗಮನ ಸೆಳೆದಿದ್ದು ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಇಡೀ ಕಾರವಾರದ ಪತ್ರಕರ್ತರಿಗೆ ಸಿಕ್ಕ ಗೌರವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಬಿ.ಹರಿಕಾಂತ್, ಕಳೆದ 25 ವರ್ಷಕ್ಕೂ ಅಧಿಕ ಕಾಲದಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಶಸ್ತಿ ಬಂದಿದ್ದು ಅಚ್ಚರಿ ಅನಿಸಿದೆ. ಇದರಿಂದ ನನಗೆ ಇನ್ನಷ್ಟು ಜವಬ್ದಾರಿ ಹೆಚ್ಚಿದ್ದು, ಪತ್ರಕರ್ತನಾಗಿ ಜನರ ಸಮಸ್ಯೆಗಳಿಗೆ ಧ್ವನಿ ಎತ್ತಲು ಇನ್ನಷ್ಟು ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಈ ವೇಳೆ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ದೇವರಾಜ ನಾಯ್ಕ, ಸದಸ್ಯರಾದ ನಾಗೇಂದ್ರ ಖಾರ್ವಿ, ಗಿರೀಶ್ ಬಾಂದೇಕರ್, ಗೌತಮ್ ಬಾಡ್ಕರ್, ಗಿರೀಶ್ ನಾಯ್ಕ, ದೀಪಕ್ ಶೆಟ್ಟಿ, ವಿನಾಯಕ ಬಡಿಗೇರ, ಗಣೇಶ್ ಹೆಗಡೆ, ಗುರುಪ್ರಸಾದ್ ಹೆಗಡೆ, ರವಿ ಕಸಬೇಕರ್, ಪ್ರವೀಣ ಹೊಸಂತೆ, ಕಿಶನ್ ಗುರವ್, ಶಶಿಧರ್, ಮಂಜುನಾಥ ಪಟಗಾರ ಹಾಗೂ ಪತ್ರಿಕಾ ಭನದ ವ್ಯವಸ್ಥಾಪಕ ಜಗದೀಶ್ ಇದ್ದರು.

300x250 AD
Share This
300x250 AD
300x250 AD
300x250 AD
Back to top