ಕಾರವಾರ: ಮಾ.3ರಂದು ಮುಂಡಗೋಡದ ವಿವೇಕಾನಂದ ಬಯಲು ರಂಗಮoಟಪದಲ್ಲಿ ಸಮನ್ವಯ ಸಮ್ಮಿಲನದ ಅಹಿಂದ ವರ್ಗಗಳ ಸಂವಿಧಾನಾತ್ಮಕ ಆಶಯಗಳ ಜಿಲ್ಲಾ ಮಟ್ಟದ ಸಮಾವೇಶವನ್ನ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕೀರಪ್ಪ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗ, ಪ.ಜಾತಿ, ಪ.ಪಂ, ಅಲ್ಪಸಂಖ್ಯಾತರೆಲ್ಲರನ್ನೂ ಒಗ್ಗೂಡಿಸಿ ಈ ಸಮಾವೇಶ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲರೂ ಒಂದಾಗಿ ಸಂವಿಧಾನದ ಆಶಯದಂತೆ ಹಕ್ಕುಗಳನ್ನ ಪಡೆಯಲು ಈ ಸಮಾವೇಶ ಆಯೋಜಿಸಿದ್ದು, ಇದು ಮಹತ್ವದ ಹಾಗೂ ಇತಿಹಾಸ ಸೃಷ್ಟಿ ಮಾಡುವ ಸಮಾವೇಶ ಎಂದರು.
ಈವರೆಗೆ ಕೆಲವರನ್ನ ಮಾತ್ರ ಸೇರ್ಪಡೆ ಮಾಡಿ ಕಾರ್ಯಕ್ರಮ ಮಾಡುತ್ತಿದ್ದೆವು. ದಲಿತ ಚಳವಳಿಯನ್ನೂ ಕೂಡ ಕೆಲವು ಮುಖಂಡರನ್ನ ಸೇರಿಸಿ ಮಾಡುತ್ತಿದ್ದೆವು. ಆದರೆ ಈ ಬಾರಿ ಹೊಸತನಕ್ಕೆ ನಾಂದಿ ಹಾಡುತ್ತಿದ್ದೇವೆ ಎಂದ ಅವರು, ಮಾ.3ರ ಬೆಳಿಗ್ಗೆ 11ಕ್ಕೆ ಶಾಸಕ ಆರ್.ವಿ.ದೇಶಪಾಂಡೆ ವೇದಿಕೆ ಉದ್ಘಾಟಿಸುವರು. ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಇಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ಶಾಸಕರುಗಳಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಸುನೀಲ ನಾಯ್ಕ, ಎಂಎಸ್‌ಸಿ ಶಾಂತಾರಾಮ ಸಿದ್ದಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಮಾಜಿ ಶಾಸಕರುಗಳಾದ ಮಂಕಾಳ ವೈದ್ಯ, ಸತೀಶ ಸೈಲ್, ಶಾರದಾ ಶೆಟ್ಟಿ, ಉದ್ಯಮಿ ಶ್ರೀನಿವಾಸ ಹೆಬ್ಬಾರ, ಮಾಜಿ ಶಾಸಕ ವಿ.ಎಸ್.ಪಾಟೀಲ್, ಭೀಮಣ್ಣ ನಾಯ್ಕ, ಲಕ್ಷö್ಮಣ ಬನಸೋಡೆ, ಉಪೇಂದ್ರ ಪೈ, ರವಿಗೌಡ ಪಾಟೀಲ್ ಮುಂತಾದರು ಹಾಜರಿರುತ್ತಾರೆ ಎಂದು ಮಾಹಿತಿ ನೀಡಿದರು.
ಹಳ್ಳೇರು, ಕರೆ ಒಕ್ಕಲಿಗ ಗೌಡರು, ಹಕ್ಕಿಪಿಕ್ಕಿ ಜನಾಂಗ ಹೀಗೆ ಸಣ್ಣಪುಟ್ಟ ಜನಾಂಗಗಳಿಗೆ ಈವರೆಗೂ ಮೀಸಲಾತಿ ಸಿಕ್ಕಿಲ್ಲ. ಸಮಸಮಾಜ ನಿರ್ಮಾಣವಾಗಲು ಎಲ್ಲರೂ ಒಗ್ಗಟ್ಟಾಗಬೇಕಿದೆ. ಇವರೆಲ್ಲರಿವೂ ಮೀಸಲಾತಿ ಸಿಕ್ಕಾಗ ಮಾತ್ರ ಅಶಕ್ತರು ಶಕ್ತರಾಗಿ ಸರಿಸಮವಾಗಿ ನಡೆಯಲು ಸಾಧ್ಯ. ಒಗ್ಗಟ್ಟಿಗಾಗಿಯೇ ಈ ಸಮಾವೇಶ ನಡೆಸುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಹಿಂದ ವರ್ಗದ ಎಲ್ಲರೂ ಒಂದಾಗಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಎಚ್.ಕೆ.ಶಿವಾನಂದ, ಜಿಲ್ಲಾ ಸಂಘಟನಾ ಸಂಚಾಲಕ ಆಂಜನೇಯ ವಡ್ಡರ್, ಎಚ್.ವೈ.ಕಟ್ಟಿಮನಿ ಇದ್ದರು.
ಮಾ.3ಕ್ಕೆ ಅಹಿಂದ ವರ್ಗಗಳ ಜಿಲ್ಲಾ ಮಟ್ಟದ ಸಮಾವೇಶ
