• Slide
    Slide
    Slide
    previous arrow
    next arrow
  • ಬಹುಮುಖ ಪ್ರತಿಭೆಯ ಸೋಮು ಗೌಡಗೆ ಸನ್ಮಾನ

    300x250 AD

    ಅಂಕೋಲಾ: ಬಹುಮುಖ ಪ್ರತಿಭೆಯ ದೊಳೆಮನೆ ಸೋಮು ಗೌಡ ಅವರನ್ನು ಅಚವೆಯ ದುರ್ಗಾಂಬಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

    ಸಂಘದ ವತಿಯಿಂದ ನಡೆದ ‘ಹಾಲಕ್ಕಿ ಕಪ್’ ಕ್ರಿಕೆಟ್ ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಕೋಲಾ ತಾಲೂಕಿನ ತಹಶಿಲ್ದಾರ ಸತೀಶ್ ಗೌಡ ಸನ್ಮಾನಿಸಿದರು.
    ಮೂಲತಃ ಬೆಳಂಬಾರ ಮೂಲದವರಾದ ಸೋಮು ಗೌಡ ಕೃಷಿಯ ಎಲ್ಲ ಪರಿಕರಗಳನ್ನು ಅದೆಷ್ಟೋ ವರ್ಷದಿಂದ ಮಾಡುತ್ತ ಬಂದಿದ್ದಾರೆ. ಕೂಗಲಬಳ್ಳಿ, ಬೆತ್ತದ ಬೇರೆ ಬೇರೆ ತರದ ಬುಟ್ಟಿಗಳನ್ನು, ಬಾಳೆ ಹಂಬೆ ಕಟ್ಟಿ ಡೆಕೊರೇಟ್ ಮಾಡುವ ಕಲೆ, ಕಟ್ಟಡ ಕಟ್ಟುವ ಗಾವಂಡಿ ಕೆಲಸವೂ ಇವರಿಗೆ ಕರಗತವಾಗಿದೆ. ಕೊಳಲು, ಶೆಹನಾಯಿ ವಾಲಗ ಊದುವ ಇವರು ಬೆಳಂಬಾರ ಸುಗ್ಗಿಯ ಬಗ್ಗೆ ಅದರ ವಿಶಿಷ್ಟತೆಗಳ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top