Slide
Slide
Slide
previous arrow
next arrow

ದೇಶಪಾಂಡೆ ಮುಂದಿನ ಮುಖ್ಯಮಂತ್ರಿ: ಸುರೇಶ್ ಕಾಮತ್ ವಿಶ್ವಾಸ

300x250 AD

ದಾಂಡೇಲಿ: ನಗರದ ಜಿಎಸ್‌ಬಿ ಸಮಾಜದ ವತಿಯಿಂದ ಕುಳಗಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ಸನ್ಮಾನ ಸಮಾರಂಭ ನಡೆಯಿತು.
ರಾಜ್ಯ ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಹಿನ್ನಲೆಯಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಮುಂಚೆ ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಎಸ್.ಬಿ ಸಮಾಜದ ಕಾರ್ಯದರ್ಶಿ ಸುರೇಶ್ ಕಾಮತ್, ಆರ್.ವಿ.ದೇಶಪಾಂಡೆಯವರು ನಮ್ಮ ಸಮಾಜಕ್ಕೆ ಬಹುದೊಡ್ಡ ಹೆಮ್ಮೆ. ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಅಭಿವೃದ್ಧಿಯಲ್ಲಿ ದೇಶಪಾಂಡೆಯವರ ಪಾತ್ರ ಅತ್ಯಂತ ಅವಿಸ್ಮರಣೀಯ. ಈ ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ಜನನಾಯಕರಾಗಿರುವ ಆರ್.ವಿ.ದೇಶಪಾಂಡೆಯವರು ಯಾವತ್ತೊ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಮುಂಬರಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು, ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್.ವಿ.ದೇಶಪಾಂಡೆಯವರ ವರ್ಚಸ್ಸು, ನಾಯಕತ್ವ, ಕ್ಷೇತ್ರದ ಬಗ್ಗೆ ಅವರಿಗಿರುವ ದೂರದೃಷ್ಟಿ ವಿಚಾರಧಾರೆಗಳು, ಕ್ಷೇತ್ರದ ಅಭಿವೃದ್ಧಿಗೆ ತಂದ ಕೋಟಿ ಕೋಟಿ ಅನುದಾನಗಳನ್ನು ಯಾರು ಮರೆಯುವಂತಿಲ್ಲ. ಅವರ ಜನಪರ ಸೇವೆಯ ಫಲಶೃತಿಯಾಗಿ ಮುಂಬರಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ವಿಜಯದ ಪತಾಕೆಯನ್ನು ಹಾರಿಸಲಿದ್ದಾರೆ ಎಂದರಲ್ಲದೇ ನಗರದ ಜಿ.ಎಸ್.ಬಿ ಸಮಾಜದ ದೇವಸ್ಥಾನಕ್ಕೆ ಜಾಗ ನೀಡುವಲ್ಲಿ ದೇಶಪಾಂಡೆಯವರ ಪಾತ್ರ ಮತ್ತು ಕೊಡುಗೆಯನ್ನು ಜಿ.ಎಸ್.ಬಿ ಸಮಾಜ ಬಾಂಧವರು ಯಾರು ಮರೆಯುವಂತಿಲ್ಲ. ಸೂಕ್ತ ವ್ಯಕ್ತಿಗೆ ಈ ಭಾರಿ ವಿಧಾನ ಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿ ಬಂದಿರುವುದು ಕ್ಷೇತ್ರ ಜನರಿಗೆ ಮಾತ್ರವಲ್ಲದೇ ಪ್ರತಿಯೊಬ್ಬ ಜಿ.ಎಸ್.ಬಿ ಸಮಾಜಬಾಂಧವರ ಗೌರವವನ್ನು ಇಮ್ಮಡಿಗೊಳಿಸಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇಶಪಾಂಡೆ, ಕರ್ನಾಟಕ ವಿಧಾನಸಭೆ ನನಗೆ ನೀಡಿದ ಪ್ರಶಸ್ತಿ ನನ್ನ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೆ ಸಲ್ಲಬೇಕು. ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆಯಿಟ್ಟು ಆರಿಸಿದ ಫಲವಾಗಿ ನಾನು ಸಾಸಕನಾಗಿ, ಸಚಿವನಾಗಿ ಸೇವೆ ಸಲ್ಲಿಸಲು ಮಹತ್ವದ ಅವಕಾಶ ಪಡೆಯಲು ಸಾಧ್ಯವಾಯಿತೆಂದು ಹೇಳಿ ಸಮಾಜ ಬಾಂಧವರು ನೀಡಿದ ಸನ್ಮಾನ ನನಗೆ ಮತ್ತಷ್ಟು ಶಕ್ತಿಯನ್ನು ನೀಡಿದೆ ಎಂದು ಕೃತಜ್ಞತೆನ್ನು ಸಲ್ಲಿಸಿದರು.
ಪ್ರಥಮ್ ಜಯರಾಮ್ ಪ್ರಭು ಪ್ರಾರ್ಥಿಸಿದ ಕರ‍್ಯಕ್ರಮಕ್ಕೆ ಸುರೇಶ್ ಕಾಮತ್ ಸ್ವಾಗತಿಸಿದರು. ನಿಧಿ ಮಲ್ಯರವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜದ ಹಿರಿಯರಾದ ವಿಷ್ಣು ಕಾಮತ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಪ್ರಂಉಕರುಗಳಾದ ವಾಸುದೇವ ಪ್ರಭು,  ರಾಧಾಕೃಷ್ಣ ಪ್ರಭು, ಜಿ.ಎಸ್.ಬಿ ಯುವವಾಹಿನಿ ದಾಂಡೇಲಿಯ ಅಧ್ಯಕ್ಷರಾದ ಪುರುಷೋತ್ತಮ ಮಲ್ಯ ಮತ್ತು ಸ್ಪೂರ್ತಿ ಮಹಿಳಾ ಮಂಡಳದ ಅಧ್ಯಕ್ಷರಾದ ಪ್ರತಿಮಾ ಕಾಮತ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top