ಭಟ್ಕಳ: ಪಟ್ಟಣದ ವಡೇರಮಠದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿವಿಧ ಧಾರ್ಮಿಕ ಅನುಷ್ಠಾನದೊಂದಿಗೆ ಶನಿವಾರ ನಡೆಯಿತು.
ಲೋಕಕಲ್ಯಾಣಾರ್ಥಕವಾಗಿ ನಡೆದ ಈ ಸಮಾರಂಭ ಪಟ್ಟಣದ ವಡೇರ ಮಠದ ಇತಿಹಾಸದಲ್ಲಿ ಇದು ಮೊದಲ ಶ್ರೀಗೋಪಾಲಕೃಷ್ಣ ರುಕ್ಮಿಣಿ ಕಲ್ಯಾಣೋತ್ಸವ. ಚಂದ್ರಕಾಂತ ಶ್ರೀನಿವಾಸ ಕಾಮತ, ಸೀಮಾ ಕಾಮತ ವರನ ಕಡೆಯಿಂದ ಸೇವೆ ಸಲ್ಲಿಸಿದರೆ, ಅಚ್ಯುತ ಕಮಲಾಕರ ಕಾಮತ ಮತ್ತು ಅಕ್ಷತಾ ಕಾಮತ ವಧುವಿನ ಕಡೆಯಿಂದ ಸೇವೆ ಸಲ್ಲಿಸಿದರು. ಶಾಸ್ತ್ರ-ಸಂಪ್ರದಾಯದಂತೆ ಮದುವೆ ಸಮಾರಂಭದಲ್ಲಿ ನಡೆಯುವ ಎಲ್ಲಾ ವಿಧಿವಿಧಾನಗಳು ನಡೆಯಿತು.
ವೆ.ಮೂ ಕಿಶೋರ ಭಟ್, ವಿನೋದ ಭಟ್ ವೈದಿಕರಾಗಿ ವಿವಾಹ ಮಹೋತ್ಸವ ನೇರವೇರಿಸಿದರು. ಗೋದೋಳಿ ಮಹೂರ್ತದಲ್ಲಿ ಕಲ್ಯಾಣೋತ್ಸವ ನಡೆಯಿತು. ಬಳಿಕ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ಸುರೇಂದ್ರ ಕಾಮತ, ಡಾ.ಸುರೇಶ ನಾಯಕ, ಡಾ.ಸವಿತಾ ಕಾಮತ, ನಾಗೇಶ ಪೈ, ನಾಗೇಶ ಕಾಮತ, ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ ಇತರರು ಉಪಸ್ಥಿತರಿದ್ದರು.